×
Ad

ಸಂಚಾರ ನಿಯಮ ಉಲ್ಲಂಘನೆ: ನಾಲ್ಕು ದಿನದಲ್ಲಿ 1,542 ಕೇಸು ದಾಖಲು

Update: 2019-04-01 22:12 IST

ಮಂಗಳೂರು, ಎ.1: ನಗರದಲ್ಲಿ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಮಂಗಳೂರು ಸಂಚಾರ ಪೊಲೀಸರು, ಕಳೆದ ನಾಲ್ಕು ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ, ಸವಾರರ ವಿರುದ್ಧ 1,542 ಪ್ರಕರಣ ದಾಖಲಿಸಿದ್ದಾರೆ.

ನಗರದಲ್ಲಿ ನೋ ಪಾರ್ಕಿಂಗ್ ಸೇರಿದಂತೆ ಸಿಕ್ಕಸಿಕ್ಕಲ್ಲಿ ವಾಹನ ಪಾರ್ಕಿಂಗ್ ಮಾಡಿ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರ ವ್ಯಾಪ್ತಿ ಟೋಯಿಂಗ್ ಯಂತ್ರದ ಮೂಲಕ ವಾಹನ ಎತ್ತಂಗಡಿ ಕಾರ್ಯ ನಡೆಯುತ್ತಿದ್ದು, ಒಟ್ಟು 212 ಕೇಸುಗಳು ದಾಖಲಾಗಿವೆ.

ಮಂಗಳೂರು ನಗರದ ವಿವಿಧೆಡೆ ಝಿಬ್ರಾ ಲೈನ್ ದಾಟಿದ ವಾಹನಗಳ ವಿರುದ್ಧ 422 ಕೇಸುಗಳು ದಾಖಲಾಗಿವೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಸವಾರರ ವಿರುದ್ಧ 272 ಕೇಸುಗಳು ದಾಖಲಾಗಿವೆ. ಟಾರ್ಪಲ್‌ಗಳನ್ನು ಬಳಸದೇ ಚಲಿಸುತ್ತಿದ್ದ ಲಾರಿಗಳ ವಿರುದ್ಧ 94 ಕೇಸು, ಅತಿವೇಗದ ಚಾಲನೆ ಮಾಡುತ್ತಿದ್ದ 212 ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಕಾರುಗಳಿಗೆ ಟಿಂಗ್ ಗ್ಲಾಸ್ ಅಳವಡಿಸವಾರದೆಂದು ಈಗಾಗಲೇ ಸೂಚನೆ ನೀಡಿದ್ದರೂ ಹಲವರು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಕಾರುಗಳಿಗೆ ಟಿಂಟ್ ಗ್ಲಾಸ್ ಅಳವಡಿಸಿದ 186 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ. ಬಸ್‌ಗಳಲ್ಲಿ ಅಳವಡಿಸಿದ್ದ 144 ಅಧಿಕ ಶಬ್ದದ ಹಾರ್ನ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News