×
Ad

ಅಕ್ರಮ ಮರಳು ಸಾಗಾಟ: ಇಬ್ಬರು ಆರೋಪಿಗಳು ಸೆರೆ

Update: 2019-04-01 22:26 IST

ಕೋಟ, ಎ.1: ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಮೇಸ್ತನಕುದ್ರು ಎಂಬಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಇಬ್ಬರನ್ನು ಕೋಟ ಪೊಲೀಸರು ಮಾ. 31ರಂದು ಅಪರಾಹ್ನ ವೇಳೆ ಬಂಧಿಸಿದ್ದಾರೆ.

ಉಮೇಶ್ ದೇವಾಡಿಗ ಮತ್ತು ರೋಶನ್ ಲೂವೀಸ್ ಬಂಧಿತ ಆರೋಪಿಗಳು. ಇವರಿಂದ ವಾಹನ, ಮರಳು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News