'ಅಪಪ್ರಚಾರಕ್ಕೆ ಜನ ಉತ್ತರ ನೀಡುತ್ತಾರೆ'

Update: 2019-04-01 17:15 GMT

ಬೆಳ್ತಂಗಡಿ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೀಡಿದರು. ಸೋಮವಾರ ಮುಂಜಾನೆ ಧರ್ಮಸ್ಥಳಕ್ಕೆ ಆಗಮಿಸಿದ ಸುಮಲತಾ ಅವರು ಸನ್ನಿಧಿ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆದು ಬಳಿಕ 10-30ಕ್ಕೆ ಶ್ರೀಮಂಜುನಾಥ ಸ್ವಾಮಿ ದರ್ಶನ ಪಡೆದರು.

ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಖ.ಹರ್ಷೇಂದ್ರ ಕುಮಾರ್ ಅವ ರೊಂದಿಗೆ ಮಾತುಕತೆ ನಡೆಸಿದರು. ಕ್ಷೇತ್ರದ ವತಿಯಿಂದ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ದೇವಳದ ಪಾರುಪತ್ಯಗಾರ ಲಕ್ಷ್ಮೀ ನಾರಾಯಣರಾವ್, ಕಚೇರಿ ಪ್ರಬಂಧಕ ಪಾರ್ಶ್ವನಾಥ್ ಜೈನ್ ಸ್ವಾಗತಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ಅಂಬರೀಶ್ ಕ್ಷೇತ್ರದ ಭಕ್ತರು. ನಾನು ಹಾಗೂ ಅಂಬರೀಶ್ ಎರಡು ವರ್ಷಗಳ ಹಿಂದೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೇವು. ಇಂದು ಧಮರ್ಸ್ಥಳ ಭೇಟಿ ರಾಜಕೀಯ ಪ್ರೇರಿತವಲ್ಲ. ಮಂಡ್ಯದಿಂದ ಪಕ್ಷೇತರಳಾಗಿ ಸ್ಪರ್ಧಿಸುತ್ತಿದ್ದು, ದೇವರ ದರ್ಶನ ಮಾಡಿ ಸೇವೆ ಸಲ್ಲಿಸುವ ಹಿನ್ನೆಯಲ್ಲಿ ನಾನು ಭೇಟಿ ನೀಡಿದ್ದೇನೆ.

ಅಪಪ್ರಚಾರಕ್ಕೆ ಜನ ಉತ್ತರ ನೀಡುತ್ತಾರೆ

ನನ್ನ ಮೇಲಿನ ವಿರೋಧಿಗಳ ಅಪಪ್ರಚಾರಕ್ಕೆ ಜನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಇದರ ಬಗ್ಗೆ ನಾನೇನು ಪ್ರತಿಕ್ರಿಯಿಸಲಾರೆ. ಶಿವರಾಮೇ ಗೌಡ ಅವರು ಅಂಬರೀಶನ್ನು ಲೇವಡಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಅವರ ಮಟ್ಟಕ್ಕೆಇಳಿಯುವ ಸಂಸ್ಕಾರ ನನ್ನದಲ್ಲ, ಇನ್ನುಳಿದ 16 ದಿನದಲ್ಲಿ ಇದಕ್ಕೆಲ್ಲ ಉತ್ತರ ಸಿಗಲಿದೆ ಎಂದರು.

ಸುಮಲತಾ ಎಂಬ ಹೆಸರಲ್ಲಿ ಬೇರೆ ಬೇರೆ ಅಭ್ಯರ್ಥಿಗಳು ಸ್ಪರ್ಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು,ಈ ಹಿಂದೆ ಪುಟ್ಟಣ್ಣಯ್ಯ ಸ್ಪರ್ಧೆ ಸಂದರ್ಭ ಇದೇ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅವರು ಗೆದ್ದು ಬಂದಿದ್ದರು. ಅದೇ ರೀತಿ ನಾನು ರಾಜ್ಯದಜನತೆಗೆ ಅಪರಿಚಿತಳಲ್ಲ.ಚಿರಪರಿಚಿತಳೇ.ಮತ್ತೊಂದೆಡೆ ಅಭ್ಯರ್ಥಿ ಫೋಟೋ ಇರುತ್ತದೆ. ಜನ ನಮ್ಮನ್ನು ಗುರುತಿಸಿ ಮತ ನೀಡುವ ಮೂಲಕ ನನ್ನನ್ನು ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾನೂನಿನ ಚೌಕಟ್ಟಿನಲ್ಲಿ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಮತ ಪ್ರಚಾರ ಆರಂಭ

ಶ್ರೀರಂಗ ಪಟ್ಟಣದಲ್ಲಿ ಈಗಾಗಲೇ ದರ್ಶನ್ ಮತ ಪ್ರಚಾರ ಕೈಗೊಂಡಿದ್ದಾರೆ. ಮಂಗಳವಾರ ನಟ ಯಶ್ ಪ್ರಚಾರದಲ್ಲಿ ಕೂಡಿಕೊಳ್ಳಲಿದ್ದಾರೆ. ನಾನು ಸೇರಿ ಬೆಂಬಲಿಗರು ಮಂಗಳವಾರದಿಂದ ಪ್ರಚಾರದಲ್ಲಿ ನಿರಂತರ ತೆರಳಲಿದ್ದೇನೆ.  ಸುಮಲತಾ ಅಂಬರೀಶ್ ಮುಂಜಾನೆ 5 ಗಂಟೆಗೆ ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ಅವರ ಜತೆ ಧರ್ಮಸ್ಥಳಕ್ಕೆ ಆಗಮಿಸಿ 10.30 ಗಂಟೆಗೆ ದೇವರ ದರ್ಶನ ಮಾಡಿದರು. ಬಳಿಕ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮೈಸೂರಿಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News