ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರೋಡ್ ಶೋ

Update: 2019-04-01 17:19 GMT

ಬೆಳ್ತಂಗಡಿ: ಲೋಕಸಭಾ ಚುನಾವಣಾ ಪ್ರಯುಕ್ತ ಸೋಮವಾರ ದ.ಕ. ಜಿಲ್ಲಾ ಕಾಂಗ್ರೆಸ್ ಸಾರ್ವಜನಿಕ ಪ್ರಚಾರ ಸಭೆಯನ್ನು ಬೆಳ್ತಂಗಡಿಯಿಂದ ಆರಂಭಗೊಳಿಸಿದ್ದು, ಸಮಾವೇಶಕ್ಕಿಂತ ಮೊದಲು ಬೃಹತ್ ರೋಡ್ ಶೋ ನಡೆಯಿತು.

ಸಮಾವೇಶದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ಈ ರೋಡ್ ಶೋ ಸಾಥ್ ನೀಡಿದರು. ಉರಿಬಿಸಿಲನ್ನು ಲೆಕ್ಗಕಿಸದೇ ಸಹಸ್ರರು ಸಂಖ್ಯೆಯಲ್ಲಿ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಮಂದಿರದ ತೆರೆದ ವಾಹನದಲ್ಲಿ ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ನೆರೆದಿದ್ದರು. ರಸ್ತೆಯುದ್ದಕ್ಕೂ ಸಾಗಿದ ಮೆರವಣಿಗೆ ಪೇಟೆಯ ಅಂಬೇಡ್ಕರ್ ಭವನದ ವರೆಗೆ ಸಾಗಿತು.ಕೊಂಬು, ಕಹಳೆ, ನಾಸಿಕ್‌ಬ್ಯಾಂಡ್ ಹಾಗೂ ಕೀಲುಕುದುರೆ ಕುಣಿತದ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲಾಯಿತು. ಕಾರ್ಯಕರ್ತರು ಪುಷ್ಪವೃಷ್ಟಿ ಮಾಡಿ ಘೋಷಣೆ ಕೂಗಿದರು.

ಸಮಾವೇಶದಲ್ಲಿ ಹಲವು ಯುವಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಈ ವೇಳೆ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಉರಿಬಿಸಿಲಿ ತಾಪಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರಿಗೆ  ಸಮಾವೇಶದಲ್ಲಿ ಮಜ್ಜಿಗೆ ವಿತರಿಸಲಾಯಿತು. ಇದೇ ಸಂದರ್ಭ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಉದ್ಘಾಟಿಸಲಾಯಿತು.

ವಿಜಯ ಬ್ಯಾಂಕಿಗೆ ಮೊಳೆ ಒಡೆದ ಕಾಂಗ್ರೆಸ್ಸಿಗರು

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಟಿತ ರಾಷ್ಟ್ರೀಕೃತ ಬ್ಯಾಂಕ್ ವಿಜಯ ಬ್ಯಾಂಕ್ ಬರೋಡ ಬ್ಯಾಂಕಿನೊಂದಿಗೆ ವಿಲೀನವಾಗಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಮೊಳೆ ಒಡೆಯುವ ಮೂಲಕ ವಿರೋಧವನ್ನು ವ್ಯಕ್ತಪಡಿಸಿತು.

ಬೆಳ್ತಂಗಡಿ ಗುರುನಾರಾಯಣ ವಾಣಿಜ್ಯ ಸಂಕೀರ್ಣದಲ್ಲಿದ್ದ ವಿಜಯ ಬ್ಯಾಂಕಿನ ಕಚೇರಿಯ ಬಾಗಿಲಿಗೆ ಮೊಳೆಯನ್ನು ಒಡೆಯಲಾಯಿತು. ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹಾಘೂ ಮಾಜಿ ಶಾಸಕ ಮೊಳೆ ಒಡೆದು ವಿರೋಧ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News