×
Ad

ಉಳ್ಳಾಲ: ಎಸ್‍ಡಿಪಿಐ ಚುನಾವಣಾ ಕಚೇರಿ ಉದ್ಘಾಟನೆ

Update: 2019-04-01 23:01 IST

ಉಳ್ಳಾಲ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಾ ಕಣದಲ್ಲಿ ಎಸ್‍ಡಿಪಿಐ ಇದೆ. ಇದಕ್ಕೆ ಉಳ್ಳಾಲದಲ್ಲಿ ಉತ್ತಮ ಭವಿಷ್ಯ ಇದೆ. ಕೇವಲ ಪಕ್ಷ ಕಟ್ಟುವುದು ನಮ್ಮ ಉದ್ದೇಶವಲ್ಲ, ಜತೆಗೆ ಅಭಿವೃದ್ಧಿ ಕೆಲಸ ಕೂಡಾ ಆಗಬೇಕು ಎಂದು ಎಸ್‍ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ಹೇಳಿದರು.

ಅವರು ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಸೋಮವಾರ ಎಸ್‍ಡಿಪಿಐ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಚುನಾವಣೆ ಬರುತ್ತದೆ, ಹೋಗುತ್ತದೆ. ನಮಗೆ ಚುನಾವಣೆಮಾತ್ರ ಮುಖ್ಯವಾಗಿರಬಾರದು. ಇದರ ಜತೆಗೆ ಬಡವರ ಸೇವೆ ಕೂಡಾ ಮಾಡಬೇಕು. ಜನಪರ ಕೆಲಸ ಪಕ್ಷದಿಂದ ಆಗಬೇಕು. ಉಳ್ಳಾಲ ನಗರಸಭೆಯಲ್ಲಿ ಈಗಾಗಲೇ ಎಸ್‍ಡಿಪಿಐ ಖಾತೆ ತೆರೆದಿದೆ. ಮುಂದೆ ಹಂತ ಹಂತವಾಗಿ ಖಾತೆ ತೆರದು ಅಭಿವೃದ್ದಿಯತ್ತ ಸಾಗಬೇಕಾಗಿದೆ ಎಂದರು.

ಎಸ್‍ಡಿಪಿಐ ರಾಜ್ಯ ಮುಖಂಡ ಅಕ್ರಮ್ ಹಸನ್ ಮಾತನಾಡಿ, ಪಕ್ಷದ ಸಿದ್ಧಾಂತವನ್ನು ಅನುಕರಣೆ ಮಾಡಿ ಚುನಾವಣಾ ಕಾರ್ಯದಲ್ಲಿ ತೊಡಗಬೇಕಾಗಿದೆ. ಚುನಾವಣಾ ಸಂದಭ್ ಕಚೇರಿ ಅಗತ್ಯತತೆ ಇದ್ದುದರಿಂದ ಅದನ್ನು ಈಗಾಗಲೇ ಮಾಡಲಾಗಿದೆ. ಇನ್ನು ಪಕ್ಷಕ್ಕಾಗಿ ಕಾರ್ಯಕರ್ತರು ದುಡಿದು ಪಕ್ಷದ ಗೆಲುವಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಜಿಲ್ಲಾ ಮುಖಂಡರಾದ ಹನೀಫ್ ಖಾನ್ ಕೊಡಾಜೆ, ಅಬ್ಬಾಸ್ ಕಿನ್ಯ, ಲತೀಫ್ ಕೊಡಿಜಾಲ್, ಅನ್ಸಾರ್ ಮಲಾರ್ , ಸಯೀದ್ ಮೊದಲಾದವರು ಇದ್ದರು. ಅಬ್ಬಾಸ್ ಕಿನ್ಯ ಸ್ವಾಗತಿಸಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News