ದಕ್ಷಿಣ ಭಾರತದ ಜನರನ್ನು ಶತ್ರುಗಳಂತೆ ಕಾಣುತ್ತಿರುವ ಮೋದಿ: ರಾಹುಲ್ ಕಿಡಿ

Update: 2019-04-02 11:40 GMT

ಹೊಸದಿಲ್ಲಿ, ಎ. 2: ಪ್ರಧಾನಮಂತ್ರಿ ನರೇಂದ್ರ ವೆೋದಿ ದಕ್ಷಿಣ ಭಾರತದ ಜನರನ್ನು ಶತ್ರುಗಳಂತೆ ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಕೋಮುವಾದ ಹರಡಲು ಬಿಜೆಪಿ ಶ್ರಮಿಸುತ್ತಿದೆ. ಈ ಕಾರಣದಿಂದ ದಕ್ಷಿಣಭಾರತದ ಜನರೊಂದಿಗೆ ನಿಲ್ಲಲು ತಾನು ಕೇರಳದಿಂದ ಸ್ಪರ್ಧಿಸುತ್ತಿರುವುದಾಗಿ ರಾಹುಲ್ ಹೇಳಿದರು.

ದೇಶೀಯ ಭದ್ರತೆ, ಭ್ರಷ್ಟಾಚಾರ, ವಿದೇಶಾಂಗ ನೀತಿ ಮತ್ತಿತರ ವಿಷಯಗಳ ಬಗ್ಗೆ ಬಹಿರಂಗ ಚರ್ಚೆ ನಡೆಸಲು ರಾಹುಲ್‌ಗಾಂಧಿ ಮೋದಿಗೆ ಸವಾಲೆಸೆದರು.

ಮೋದಿ ಸರಕಾರ ದಕ್ಷಿಣಭಾರತವನ್ನು ನಿರ್ಲಕ್ಷಿಸುತ್ತಿದೆ. ತಾನು ದಕ್ಷಿಣಭಾರತದೊಂದಿಗಿದ್ದೀನೆ. ಜನರ ಸಮಸ್ಯೆಗಳಿಂದ ಅವರ ಗಮನ ಬೇರೆಡೆ ಸೆಳೆಯಲು ಶ್ರಮಿಸುವುದಿಲ್ಲ. ಚೌಕೀದಾರ್ ಕಳ್ಳನಾಗಿದ್ದು ಮತ್ತು ಆತನಿಗೆ ಓಡಿಹೋಗಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒಂದು ವರ್ಷ ಪೂರ್ತಿ ಶ್ರಮ ವಹಿಸಿದ ಫಲವಾಗಿ ಪ್ರಣಾಳಿಕೆ ಸಿದ್ಧವಾಗಿದೆ. ಯಾವುದೇ ಸುಳ್ಳು ಆಶ್ವಾಸನೆಗಳೂ ಅದರಲ್ಲಿಲ್ಲ. ಜನರ ಶಬ್ದ ಅದರಲ್ಲಿ ಕೇಳಿಸುತ್ತಿದೆ. ಎಲ್‌ಜಿಬಿಟಿ ವಿಭಾಗದ, ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸಲಾಗುವುದು. ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲಾಗುವುದು. ‘ನ್ಯಾಯ್’ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ರಾಹುಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News