ಎಸೆಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 188 ಮಂದಿ ಗೈರು
Update: 2019-04-02 19:12 IST
ಉಡುಪಿ, ಎ.2: ಜಿಲ್ಲೆಯಲ್ಲಿ ಮಂಗಳವಾರ ನಡೆದ ಎಸೆಸೆಲ್ಸಿಯ ವಿಜ್ಞಾನ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 13,623 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 13,811 ಮಂದಿ ಪರೀಕ್ಷೆಗೆ ಹೆಸರು ನೊಂದಾಯಿಸಿದ್ದು, ಇವರಲ್ಲಿ 188 ಮಂದಿ ಗೈರುಹಾಜರಾಗಿದ್ದಾರೆ.
ಪರೀಕ್ಷೆಗೆ ನೊಂದಾಯಿಸಿದ 13328 ಮಂದಿ ರೆಗ್ಯುಲರ್ ಮತ್ತು ರೆಗ್ಯುಲರ್ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 134 ಮಂದಿ ಗೈರು ಹಾಜರಾಗಿದ್ದು, 13194 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆಗೆ ಹೆಸರು ನೊಂದಾ ಯಿಸಿದ್ದ 483 ಅ್ಯರ್ಥಿಗಳಲ್ಲಿ 54 ಮಂದಿ ಗೈರು ಹಾಜರಾಗಿದ್ದು, 429 ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.