×
Ad

ಸಮುದ್ರದಲ್ಲಿ ಮೀನುಗಾರರ ಸುರಕ್ಷತೆಗೆ ಸೂಚನೆಗಳು

Update: 2019-04-02 21:09 IST

ಉಡುಪಿ, ಎ.2: ಸಮುದ್ರದಲ್ಲಿ ದೋಣಿ/ ಬೋಟುಗಳಲ್ಲಿ ಹೋಗುವಾಗ/ಬರುವಾಗ ಕಡ್ಡಾಯವಾಗಿ ನ್ಯಾವಿಗೇಶನ್ ಲೈಟ್ ಹಾಕಿಕೊಳ್ಳಬೇಕು ಮತ್ತು ವಾಣಿಜ್ಯ ಹಡಗುಗಳು ಓಡಾಡುವ ದಾರಿಯಲ್ಲಿ ಮೀನುಗಾರಿಕಾ ಬೋಟುಗಳು ಅಡ್ಡಸಾಗದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೇ ಎಲ್ಲಾ ಬೋಟುಗಳಲ್ಲಿ ಎಐಎಸ್ ಟ್ರಾನ್ಸ್‌ಪೋಂಡರ್ ಅಳವಡಿಸಿಕೊಂಡು ಎಂಎಂಐಎಸ್ ನಂಬರ್ ಹೊಂದಿ ಈ ಮೂಲಕ ದೋಣಿಯ ಚಲನವಲನಗಳನ್ನು ನಿಗಾವಹಿಸಬೇಕು. ಇದರಿಂದ ಸಮುದ್ರದಲ್ಲಿ ಅವಘಡಗಳು ಆಗದಂತೆ ತಡೆಯಬಹುದು.

ಈ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಕಾವಲು ಪೋಲೀಸ್ ಪಡೆ ಜಂಟಿಯಾಗಿ ಮಾಹಿತಿ ನೀಡಿದ್ದು, ಮಾ.29ರ ರಾತ್ರಿ ಸುರತ್ಕಲ್-ಮಂಗಳೂರು ಸಮೀಪ ಸುಮಾರು 20 ನಾಟಿಕಲ್ ಮೈಲ್ ದೂರ ಸಮುದ್ರದಲ್ಲಿ ಮೀನುಗಾರಿಕಾ ಬೋಟಿಗೆ- ವ್ಯಾಪಾರಿ ಹಡಗೊಂದು ಢಿಕ್ಕಿ ಹೊಡೆದಿರುವ ಮಾಹಿತಿಯಿದ್ದು, ಮೀನುಗಾರರು ಸಕಲ ಮುನ್ನೆಚ್ಚರಿಕೆ ವಹಿಸಿದ್ದಲ್ಲಿ ಇಂತಹ ಅವಘಡಗಳನ್ನು ಹಾಗೂ ಒಮ್ಮೆಮ್ಮೆ ಪ್ರಾಣ ಹಾನಿಗಳನ್ನೂ ಸಹ ತಡೆಗಟ್ಟಬಹುದು ಎಂದು ಕರಾವಳಿಯ ಸಮಸ್ತ ಮೀನುಗಾರರಿಗೆ ಮೀನುಗಾರಿಕ ಇಲಾಖೆ ಉಡುಪಿ ಹಾಗೂ ಮಲ್ಪೆಕರಾವಳಿ ಕಾವಲು ಪೋಲೀಸ್ ಪಡೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News