×
Ad

ಪ್ರಶಾಂತ್-ಸ್ಮಿತಾ ಕುಟುಂಬಸ್ಥರು ಚೆನ್ನೈ ಮೂಲಕ ಜರ್ಮನಿಗೆ

Update: 2019-04-02 22:06 IST

ಉಡುಪಿ, ಎ.2: ಜರ್ಮನಿಯಲ್ಲಿ ಹತ್ಯೆಯಾದ ಪ್ರಶಾಂತ್ ಬಸ್ರೂರು ಅವರ ತಾಯಿ ವಿನಯ ಮತ್ತು ಗಾಯಗೊಂಡಿರುವ ಸ್ಮಿತಾ ಅವರ ತಂದೆ ಡಾ.ಚಂದ್ರ ಮೌಳಿ ಹಾಗೂ ತಾಯಿ ವಿದ್ಯಾ ಬೆಂಗಳೂರು ಬದಲು ಚೆನ್ನೈ ಮೂಲಕ ಜರ್ಮನಿಗೆ ಹೊರಡಲಿದ್ದಾರೆ ಎಂದು ಪ್ರಶಾಂತ್ ಭಾವ ಶ್ರೀನಿವಾಸ್ ಶೇರಿ ಗಾರ್ ತಿಳಿಸಿದ್ದಾರೆ.

ವಿನಯ, ಡಾ.ಚಂದ್ರಮೌಳಿ ಮತ್ತು ವಿದ್ಯಾ ಅವರು ಇಂದು ಬೆಂಗಳೂರಿ ನಿಂದ ಚೆನ್ನೈಗೆ ಮಾರ್ಗದ ಮೂಲಕ ಹೊರಟಿದ್ದು, ರಾತ್ರಿ ತಲುಪುವ ಸಾಧ್ಯತೆ ಇದೆ. ನಾಳೆ ಬೆಳಗ್ಗೆ ಚೆನ್ನೈ ವಿಮಾನದ ಮೂಲಕ ಮುಂಬೈ, ಜರ್ಮನಿಯ ಫ್ರಾಂಕ್‌ಫರ್ಟ್ ಆಗಿ ಮ್ಯೂನಿಚ್ ವಿಮಾನ ನಿಲ್ದಾಣಕ್ಕೆ ಭಾರತೀಯ ಕಾಲ ಮಾನ ಎ.3ರಂದು ಸಂಜೆ 4:40ಕ್ಕೆ ತಲುಪಲಿದ್ದಾರೆ.

ಮ್ಯೂನಿಚ್ ವಿಮಾನ ನಿಲ್ದಾಣದಿಂದ ಪ್ರಶಾಂತ್ ಇರುವಲ್ಲಿಗೆ ಮಾರ್ಗದ ಮೂಲಕ ತೆರಳಲು ಸುಮಾರು ಎರಡು ತಾಸು ಅವಧಿ ಬೇಕಾಗುತ್ತದೆ. ಇವರೊಂದಿಗೆ ಜರ್ಮನಿಗೆ ಹೋಗಬೇಕಾಗಿದ್ದ ಪ್ರಶಾಂತ್ ಗೆಳೆಯ ಬೈಂದೂರಿನ ಗಣೇಶ್ ಕಾರಣಾಂತರಿಂದ ಇವರ ಜೊತೆ ಹೋಗಿಲ್ಲ. ಜರ್ಮನಿಯಲ್ಲಿ ನಡೆದಿ ರುವ ಘಟನೆ ಬಗ್ಗೆ ನಮಗೆ ಯಾವುದೇ ಸ್ಪಷ್ಟ ಮಾಹಿತಿ ಈವರೆಗೆ ದೊರೆತಿಲ್ಲ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News