×
Ad

ಅಕ್ರಮ ಮರಳು ಸಾಗಾಟ: ಚಾಲಕ ಸಹಿತ ಟಿಪ್ಪರ್ ವಶ

Update: 2019-04-02 22:14 IST

ಮಣಿಪಾಲ, ಎ.2: ಪಡು ಅಲೆವೂರು ಎಂಬಲ್ಲಿ ಎ. 2ರಂದು ಬೆಳಗ್ಗೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಚಾಲಕ ಸಮೇತ ಟಿಪ್ಪರನ್ನು ಉಡುಪಿ ಡಿಸಿಐಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಲಾರಿಯ ಚಾಲಕನನ್ನು ಉಮೇಶ ಎಂದು ಗುರುತಿಸಲಾಗಿದೆ. ಈತ ಯಾವುದೇ ಪರವಾನಿಗೆ ಮತ್ತು ದಾಖಲೆ ಇಲ್ಲದೇ ಮರಳು ಸಾಗಾಟ ಮಾಡು ತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಟಿಪ್ಪರನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News