ಸಾವಯವ ಸಂತೆಯಲ್ಲಿ ಮತದಾನ ಜಾಗೃತಿ

Update: 2019-04-02 17:02 GMT

ಮಂಗಳೂರು, ಎ.2: ನಗರದ ಮಣ್ಣುಗುಡ್ಡದ ಪರಿಸರದಲ್ಲಿ ಪ್ರತಿ ರವಿವಾರ ನಡೆಯುವ ಸಾವಯವ ಸಂತೆಯಲ್ಲಿ ‘ಇಕೋ-ಫ್ರೆಂಡ್ಸ್’ ಗ್ರೂಪ್ ವತಿಯಿಂದ ಈ ಬಾರಿ ವಿನೂತನವಾಗಿ ಮತದಾನ ಜಾಗೃತಿ ಅಭಿಯಾನ ನಡೆಯಿತು.

‘ಸಾವಯವ ತರಕಾರಿ ಮಾರಾಟಕ್ಕಿದೆ, ನಮ್ಮ ಮತ ಅಲ್ಲ’, ‘ದೇಶದ ಪ್ರಗತಿಗಾಗಿ ಮತ, ಏಳಿಗೆಗಾಗಿ ಮತ’ ಎನ್ನುವ ಕರಪತ್ರ, ಸ್ಟಿಕರ್ ಅಂಟಿಸಿ ಮತದಾನ ಮಾಡುವಂತೆ ಅಭಿಯಾನದಲ್ಲಿ ಮನವಿ ಮಾಡಲಾಯಿತು. ಮುಂದಿನ ರವಿವಾರ (ಎ.7) ಹಾಗೂ ಎ.14ರಂದು ಕೂಡ ಮತದಾನ ಜಾಗೃತಿ ಮೂಡಿಸಿ ಕೈ ಚೀಲ ವಿತರಣೆ ಮಾಡುವುದು ಅಭಿಯಾನದ ಉದ್ದೇಶವಾಗಿದೆ.

ಮಣ್ಣಗುಡ್ಡೆಯಲ್ಲಿ ರವಿವಾರ ಸಾವಯವ ಸಂತೆ ಇರುವುದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿ ಇರುತ್ತದೆ. ಹಾಗಾಗಿ ನಗರದ ‘ಇಕೋ-ಫ್ರೆಂಡ್ಸ್’ ಗ್ರೂಪ್ ವತಿಯಿಂದ ನಡೆಯುವ ಸಂತೆಯಲ್ಲಿ ಗ್ರಾಹಕರಿಗೆ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ.

ಗ್ರಾಹಕರು ಸಂತೆಯಲ್ಲಿ ಸಾವಯವ ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸುವ ಗುಂಪಿನ ಯುವಕರು ಮತದಾನ ಮತ್ತು ಮತದಾನದ ದಿನಾಂಕಗಳನ್ನು ತಿಳಿಸುತ್ತಿದ್ದರು. ಸಂತೆಯಲ್ಲಿ ಮತದಾನ ಜಾಗೃತಿ ಸಂದೇಶ ಫಲಕಗಳನ್ನು ಹಾಕಿದರು. ಜೊತೆಗೆ ಸಂತೆಯಲ್ಲಿ ಖರೀದಿಸುವ ಬಂದಿರುವ ಗ್ರಾಹಕರ ಬೈಕು ಕಾರು ಹಾಗೂ ಇತರ ವಾಹನಗಳಿಗೆ ಜಾಗೃತಿ ಸ್ಟಿಕ್ಕರ್ ಅಂಟಿಸಿದರು.ಸಾವಯವ ಸಂತೆಯಲ್ಲಿ ತರಕಾರಿ ಖರೀದಿ ಮಾಡಿದ ಬಿಲ್ಲುಗಳಲ್ಲಿ ಮತದಾನ ದಿನಾಂಕವನ್ನು ಮುದ್ರಣ ಮಾಡಿರುವುದು ವಿಶೇಷ.

ಮತದಾನ ಜಾಗೃತಿ ಕೈಚೀಲ: ನಗರದ ಮಣ್ಣುಗುಡ್ಡ, ಕದ್ರಿ ಸೇರಿದಂತೆ ವಿವಿಧೆಡೆ ಕಡ್ಡಾಯವಾಗಿ ಮತದಾನ ಮಾಡಲು ಜಾಗೃತಿ ಮೂಡಿಸಿ 5,000 ಕೈಚೀಲಗಳನ್ನು ವಿತರಿಸಲಾಯಿತು.

‘ಕಡ್ಡಾಯವಾಗಿ ಮತದಾನ ಮಾಡಿ’ ಎನ್ನುವ ಎನ್ನುವ ಸ್ಟಿಕ್ಕರ್ ಹಾಗೂ ಮತದಾನ ದಿನಾಂಕವನ್ನು ಕೈಚೀಲದ ಮೇಲೆ ಮುದ್ರಣ ಮಾಡಿ ಮನೆಮನೆಗೆ ತೆರಳಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News