​ಕೆಪಿಟಿ ಬಳಿ ವಿಶ್ವಾಸ್ ಸಾಗರ್ ವಸತಿ ಸಮುಚ್ಛಯ ಉದ್ಘಾಟನೆ

Update: 2019-04-02 17:34 GMT

ಮಂಗಳೂರು, ಎ. 2: ನಗರದ ಕೆಪಿಟಿ ಬಳಿ ವಿಶ್ವಾಸ್ ಬಾವ ಬಿಲ್ಡರ್ಸ್‌ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ವಿಶ್ವಾಸ್ ಸಾಗರ್ ವಸತಿ ಸಮುಚ್ಛಯವನ್ನು ಖ್ಯಾತ ಉದ್ಯಮಿ ಬಿ.ಎಸ್.ರಾವ್ ಉದ್ಘಾಟಿಸಿ ಶುಭ ಹಾರೈಸಿದರು.

ರಿಯಲ್‌ ಎಸ್ಟೇಟ್ ಉದ್ಯಮದ ಮಾಲಕರು ತಮ್ಮ ಉದ್ಯಮದಲ್ಲಿ ಗರಿಷ್ಠ ಲಾಭಗಳಿಸುತ್ತಾರೆ ಎನ್ನುವ ಭಾವನೆ ಸಾಮಾನ್ಯವಾಗಿ ಜನರಲ್ಲಿದೆ. ಆದರೆ ಹೆಚ್ಚುತ್ತಿ ರುವ ಭೂಮಿಯ ಬೆಲೆ, ನಿರ್ಮಾಣ ಕಾಮಗಾರಿಯ ವೆಚ್ಚ, ನಿರ್ಮಾಣದ ಸಂದರ್ಭದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ರೇರಾ ನಿಯಮಗಳ ಪಳನೆ ಯಲ್ಲಿನ ತೊಡಕುಗಳನ್ನು ನಿಭಾಯಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ನಡುವೆಯೂ ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ಕಟ್ಟಡ ನಿರ್ಮಿಸಿ ಕೊಡುತ್ತಿರುವ ವಿಶ್ವಾಸ್ ಬಾವ ಬಿಲ್ಡರ್ಸ್‌ ಸಂಸ್ಥೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಬಿ.ಎಸ್.ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಂತ ಮನೆ ಹೊಂದಬೇಕೆನ್ನುವುದು ಎಲ್ಲರ ಕನಸು. ವಾಸ ಮಾಡಲು ಒಂದು ಮನೆ ಎಲ್ಲರಿಗೂ ಬೇಕಾಗುತ್ತದೆ ಅದೊಂದು ಮೂಲಭೂತ ಅಗತ್ಯ. ಈ ನಿಟ್ಟಿನಲ್ಲಿ ವಿಶ್ವಾಸ್ ಬಾವ ಬಿಲ್ಡರ್ಸ್‌ ಈಗಾಗಲೇ 49 ಯೋಜನೆಗಳನ್ನು ಪೂರ್ಣಗೊಳಿಸಿ ಗ್ರಾಹಕರಿಗೆ ನೀಡಿ ಅವರನ್ನು ಸಂತೃಪ್ತಗೊಳಿಸಿದ ಸಂಸ್ಥೆಯಾಗಿದೆ. ಸಂಸ್ಥೆಯ ಮುಂದಿನ ಯೋಜನೆಗಳು ಯಶಸ್ವಿಯಾಗಲಿ ಎಂದು ನ್ಯಾಯವಾದಿ ಬಿ.ನಯನಾ ಪೈ ತಿಳಿಸಿದ್ದಾರೆ.

ವಿಶ್ವಾಸ್ ಬಾವ ಬಿಲ್ಡರ್ಸ್‌ ಸಂಸ್ಥೆ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಮಾತ್ರವಲ್ಲ ಸಮಾಜ ಸೇವಾ ಚಟುವಟಿಕೆಯಲ್ಲೂ ಸಮಾಜದಲ್ಲಿ ಮೂಂಚೂಣಿಯಲ್ಲಿದ್ದಾರೆ. ಟ್ಯಾಲೆಂಟ್ ರೀಸರ್ಚ್ ಸಂಸ್ಥೆಯ ಸಂಸ್ಥಾಪಕ, ವಿಶ್ವಾಸ್ ಬಾವ ಬಿಲ್ಡರ್ಸ್‌ ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ಕಳೆದ 10 ವರ್ಷಗಳಿಂದ ಮಹತ್ವದ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ ಎಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎಸ್.ಎಂ.ಆರ್.ರಶೀದ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಬ್ಯಾಂಕ್ ಆಫ್ ಬರೋಡಾದ ಎಜಿಎಂ ಎಂ.ಎಸ್.ಕುಮಾರ್, ಗ್ಲೋಬಲ್ ಟ್ರಾವೆಲ್ಸ್‌ನ ಮಾಲಕ ವಿಲಿಯಂ ಆ್ಯಂಟೋನಿ ಡಿಸೋಜ, ಅಝಾದ್ ಹಾರ್ಡ್‌ವೇರ್ ಮಾಲಕ ಮನ್ಸೂರ್ ಅಹ್ಮದ್, ದಕ್ಷಿಣ ಭಾರತದ ಸಿವಿಲ್ ಇಂಜಿನಿಯರಿಂಗ್ ಸಲಹೆಗಾರರ ಸಂಘಟನೆಯ ಉಪಾಧ್ಯಕ್ಷ ವಿಜಯ ವಿಷ್ಣುಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ವಿಶ್ವಾಸ್ ಬಾವ ಬಿಲ್ಡರ್ಸ್‌ ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ವಿಶ್ವಾಸ್ ಸಾಗರ್ ವಸತಿ ಸಮುಚ್ಛಯ ಗುಣ ಮಟ್ಟದ ತಂತ್ರಜ್ಞಾನದೊಂದಿಗೆ ಉತ್ಕೃಷ್ಟ ಸೌಲಭ್ಯಗಳೊಂದಿಗೆ ಎಲ್ಲಾ ನಾಗರಿಕ ಸೌಲಭ್ಯಗಳು ಲಭ್ಯವಿರುವ ಕೆಪಿಟಿ ಬಳಿಯ ಉತ್ತಮ ಪರಿಸರದಲ್ಲಿ ನಿರ್ಮಾಣಗೊಂಡಿದೆ.

ಈ ವಸತಿ ಸಮುಚ್ಛಯದಲ್ಲಿ ಲಕ್ಸುರಿ ಮತ್ತು ಅಲ್ಟ್ರಾ ಸ್ಪೇಶಿಯಸ್ 2 ಮತ್ತು 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು ವಿಶಾಲ ಸ್ಥಳಾವಕಾಶವನ್ನು ಹೊಂದಿರುವ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಪ್ರತಿ ಬ್ಲಾಕ್‌ಗಳಿಗೂ ಸ್ವಯಂಚಾಲಿತ ಎಲಿವೇಟರ್, ಗುಣಮಟ್ಟದ ನಿರ್ಮಾಣ ಕಾಮಗಾರಿಯ ವಸ್ತುಗಳಿಂದ ಬಳಸಲ್ಪಟ್ಟ ವಸತಿ ಸಮುಚ್ಛಯ, ವಿಶಾಲವಾದ ಕಾರ್‌ ಪಾರ್ಕಿಂಗ್, ವಾಹನ ನಿಲುಗಡೆ, ಮಕ್ಕಳ ಆಟದ ಪ್ರಾಂಗಣ, ಗ್ರಾನೈಟ್ , ಮಾರ್ಬಲ್, ಟೈಲ್ಸ್ ಬಳಸಿದ ಕಾಮನ್ ಏರಿಯಾ, ಸ್ಟೇರ್ ಕೇಸ್, ನೆಲಹಾಸುಗಳನ್ನು ಒಳಗೊಂಡಿದೆ.

ಭದ್ರತಾ ವ್ಯವಸ್ಥೆ, ರೆಟಿಕ್ಯೂಲೇಟೆಡ್‌ ಗ್ಯಾಸ್, ಕೇಬಲ್ ಟಿವಿ ಅಳವಡಿಕೆ ಅವಕಾಶವಿದೆ, ತೆರದ ಬಾವಿ, ಕೊಳವೆ ಬಾವಿ ಜೊತೆಗೆ ಮನಪಾ ನೀರಿನ ಸಂಪರ್ಕ ದೊಂದಿಗೆ ಆಧುನಿಕ ವಸತಿ ಸಮುಚ್ಛಯದ ಸೌಲಭ್ಯಗಳನ್ನು ವಿಶ್ವಾಸ್ ಸಾಗರ್ ಸಮುಚ್ಛಯ ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News