×
Ad

ಎ.5ರಂದು ಸೋದೆ ಮಠದಿಂದ ಬಡಗು ತಿಟ್ಟು ಯಕ್ಷಗಾನ

Update: 2019-04-03 18:08 IST

ಉಡುಪಿ, ಎ.3: ಧಾರ್ಮಿಕ-ಆಧ್ಯಾತ್ಮಿಕ ಅನುಸಂಧಾನದೊಂದಿಗೆ ಕಲೆ-ಶಿಕ್ಷಣ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಶ್ರೀ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಇದೇ ಎ.5ರ ಶುಕ್ರವಾರ ಸಂಜೆ 6:00ರಿಂದ ರಾತ್ರಿ 10:00 ಗಂಟೆಯವರೆಗೆ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಭೀಷ್ಮ ವಿಜಯ’ ಎಂಬ ಯಕ್ಷಗಾನ ಪ್ರದರ್ಶನವನ್ನು ಕಡಿಯಾಳಿ ಪ್ರೌಢಶಾಲೆಯ ವಠಾರದಲ್ಲಿ ಆಯೋಜಿಸಿದ್ದಾರೆ.

ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಸುನಿಲ್ ಭಂಡಾರಿ, ಶಿವಾನಂದ ಕೋಟ ಮುಮ್ಮೇಳದಲ್ಲಿ ಬಳ್ಳೂರು ಕೃಷ್ಣಯಾಜಿ, ಎಂ.ಆರ್. ವಾಸುದೇವ ಸಾಮಗ, ಕೊಂಡದಕುಳಿ ರಾಮಚಂದ್ರ ಹೆಗಡೆ, ಶಶಿಕಾಂತ ಶೆಟ್ಟಿ, ಚಪ್ಪರಮನೆ ಶ್ರೀಧರ ಹೆಗಡೆ, ಪ್ರಸನ್ನ ಶೆಟ್ಟಿಗಾರ್ ಹಾಗೂ ಇತರ ನುರಿತ ಕಲಾವಿರು ಭಾಗವಹಿಸಲಿದ್ದಾರೆ ಎಂದು ಸೋದೆ ಮಠದ ದಿವಾನರುಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News