ಅಂಚೆ ಮತದಾನ: 13,961 ಮಂದಿಗೆ ಅವಕಾಶ

Update: 2019-04-03 13:18 GMT

ಮಂಗಳೂರು, ಎ.3: ಚುನಾವಣೆಯ ಕರ್ತವ್ಯದಲ್ಲಿ ನಿರತರಾದ 13,961 ಮಂದಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮತದಾನ ಮಾಡಲು ಅವಕಾಶ ಒದಗಿಸಲಾಗಿದೆ.

ಈಗಾಗಲೇ 2,487 ಕರ್ತವ್ಯನಿರತರಿಂದ ಅಂಚೆ ಮತಪತ್ರ ಕೋರಿಕೆ ನಮೂನೆಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಹೊರಜಿಲ್ಲೆಗೆ ಸಂಬಂಧಪಟ್ಟ 1,787 ಕೋರಿಕೆಗಳನ್ನು ಆಯಾ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ.

ಅಂಚೆ ಮತಪತ್ರಗಳನ್ನು ಪೊಲೀಸ್ ಇಲಾಖೆಗೆ ಆದ್ಯತೆಯಲ್ಲಿ ನೀಡಲಾಗುತ್ತಿದೆ. ಗೃಹರಕ್ಷಕ ದಳ, ಸಾರಿಗೆ ಇಲಾಖೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ 3,568 ಚುನಾವಣಾ ಕರ್ತವ್ಯ ಪ್ರಮಾಣ ಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.

ಅಂಚೆ ಮತಪತ್ರಕ್ಕಾಗಿ ಕೋರಿಕೆ ನಮೂನೆಗಳನ್ನು ಸ್ವೀಕರಿಸಲು ಎ.11 ಕೊನೆಯ ದಿನಾಂಕ. ಚುನಾವಣಾ ಕರ್ತವ್ಯ ಪ್ರಮಾಣಪತ್ರ(ಇಡಿಸಿ) ಗಳಿಗೆ ಕೋರಿಕೆ ಪತ್ರಗಳನ್ನು ಎ.14ರವರೆಗೆ ಸ್ವೀಕರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News