×
Ad

ಯಕ್ಷಗಾನ ತರಗತಿಗೆ ಅರ್ಜಿ ಆಹ್ವಾನ

Update: 2019-04-03 20:55 IST

ಉಡುಪಿ, ಎ.3: ಕುಂದಾಪುರ ಶ್ರೀದುರ್ಗಾಂಬಿಕಾ ಯಕ್ಷಗಾನ ಕಲಾ ಕೇಂದ್ರ ಕೋಟೇಶ್ವರ ಇದರ ವತಿಯಿಂದ ಕಳೆದ 15 ವರ್ಷಗಳಿಂದ ನಡೆಯುತ್ತಿರುವ ಯಕ್ಷಗಾನ ನಾಟ್ಯಾಭಿನಯ, ನೃತ್ಯ ಅರ್ಥಗಾರಿಕೆ, ಭಾಗವತಿಕೆ, ಚಂಡೆ- ಮದ್ದಳೆ ತರಗತಿಗೆ ಆಸ್ತರಿಂದ ಅರ್ಜಿಗಳನ್ನು ಕರೆಯಲಾಗಿದೆ.

ಆಸಕ್ತ ಬಾಲಕ-ಬಾಲಕಿಯರು, ಯುವಕ- ಯುವತಿಯರಿಗೆ ಪ್ರತ್ಯೇಕ ತರಗತಿ ನಡೆಸಲಾಗುವುದು. ಈ ತರಗತಿಗೆ ಯಾವುದೇ ಶುಲ್ಕವಿರುವುದಿಲ್ಲ. ದೂರದ ವಿದ್ಯಾರ್ಥಿಗಳಿಗೆ ಊಟ, ವಸತಿ ನೀಡಲಾಗುವುದು. ತರಗತಿಯು ಶನಿವಾರ, ರವಿವಾರ ಮತ್ತು ಸರಕಾರಿ ಜಾ ದಿನಗಳಲ್ಲಿ ನಡೆಯಲಿರುವುದು.

ಪ್ರತೀ ವರ್ಷದಂತೆ ಈ ಬಾರಿಯೂ ಎ.7ರ ರವಿವಾರದಿಂದ ನೊಂದಣಿ ಮಾಡಿಕೊಳ್ಳಲಾಗುವುದು. ತರಗತಿಗೆ ಸೇರುವವರು ಪೋಷಕರೊಂದಿಗೆ ಬಂದು ನೊಂದಣಿ ಮಾಡಿಕೊಳ್ಳಬಹುದು. ಸ್ಥಳ: ಶ್ರೀದುರ್ಗಾಂಬಿಕಾ ಯಕ್ಷಗಾನ ಕೇಂದ್ರ(ರಿ), ಕೋಟೇಶ್ವರ, ಕಲ್ಪತರು ಹಿಂದೆ, ಎನ್.ಹೆಚ್.-66, ಕುಂದಾಪುರ ತಾಲೂಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 9341128802ನ್ನು ಸಂಪರ್ಕಿಸುವಂತೆ ಕೇಂದ್ರದ ಗೌರವ ಅಧ್ಯಕ್ಷನಿರಂಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News