ಧರ್ಮಸ್ಥಳ: 'ಸಹಕಾರ ಭೂಷಣ' ಪುಸ್ತಕ ಬಿಡುಗಡೆ

Update: 2019-04-03 15:48 GMT

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲೆ ಅತ್ಯಂತ ಮುಂದುವರಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಹಕಾರಿ ರಂಗದ ರೂವಾರಿ ಎಂ.ಎನ್. ರಾಜೇಂದ್ರಕುಮಾರ್ ನೇತೃತ್ವದಲ್ಲಿ ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರರಾಷ್ಟ್ರಮಟ್ಟದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಕೃಷಿ, ವಾಣಿಜ್ಯ, ವ್ಯವಹಾರ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಾಡಿದ ಸೇವೆ-ಸಾಧನೆ ಶ್ಲಾಘನೀಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರ ಜೀವನ-ಸಾಧನೆಯ ಸಮಗ್ರ ಮಾಹಿತಿ ಇರುವ “ಸಹಕಾರ ಭೂಷಣ” ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಧರ್ಮಸ್ಥಳ ಕ್ಷೇತ್ರದ ವತಿಯಿಂದ ಹೆಗ್ಗಡೆಯವರು ರಾಜೇಂದ್ರಕುಮಾರ್ ಅವರನ್ನು ಗೌರವಿಸಿ ಅಭಿನಂದಿಸಿದರು. ಸಹಕಾರಿ ರಂಗದಲ್ಲಿ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಎಲ್ಲರೂ ಕಟಿ ಬದ್ಧರಾಗಬೇಕು ಎಂದು ಹೇಳಿ ಹೆಗ್ಗಡೆಯವರು ರಾಜೇಂದ್ರಕುಮಾರ್ ನೇತೃತ್ವದ ತಂಡಕ್ಕೆ ಶುಭ ಹಾರೈಸಿದರು.

ಎಂ.ಎನ್.ರಾಜೇಂದ್ರಕುಮಾರ್ ಮಾತನಾಡಿ, ಪೂಜ್ಯ ಹೆಗ್ಗಡೆಯವರು ತನ್ನ ಮಾರ್ಗದರ್ಶಕರು. ಪ್ರಗತಿ-ಸಾಧನೆಯ ಪ್ರೇರಕ ಶಕ್ತಿ. ಶ್ರೀ ಮಂಜುನಾಥ ಸ್ವಾಮಿ ಮತ್ತು ಛತ್ರದ ಶ್ರೀ ಗಣಪತಿದೇವರ ಅನುಗ್ರಹ ಹಾಗೂ ಹೆಗ್ಗಡೆಯವರ ಆಶೀರ್ವಾದದಿಂದ  ತಾನು ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ರವೀಂದ್ರ, ಉಪನಿಬಂಧಕ ಸುರೇಶಗೌಡ ಹಾಗೂ ನಿರ್ದೇಶಕರುಗಳಾದ  ಭಾಸ್ಕರಕೋಟ್ಯಾನ್, ನಿರಂಜನ ಬಾವಂತಬೆಟ್ಟು, ದೇವಿಪ್ರಸಾದ್ ಶೆಟ್ಟಿ, ವಾದಿರಾಜ ಶೆಟ್ಟಿ, ಜಯರಾಮ ರೈ, ಎಕ್ಕಾರು ಮೋನಪ್ಪ ಶೆಟ್ಟಿ, ಜಯರಾಜರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News