ಬಿವಿಟಿಯಲ್ಲಿ ಉಚಿತ ಕಸೂತಿ ತರಬೇತಿಗೆ ಅರ್ಜಿ ಆಹ್ವಾನ

Update: 2019-04-03 16:02 GMT

ಮಣಿಪಾಲ ಎ.3: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಎ.22 ರಿಂದ ಒಂದು ತಿಂಗಳ ಉಚಿತ ಕಸೂತಿ ಹಾಗೂ ಇತರ ಕರಕುಶಲತೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಸ್ವ ಉದ್ಯೋಗ ಮಾಡಲು ಆಸಕ್ತಿ ಇರುವ ಮಹಿಳೆಯರು ಹಾಗೂ ಶಾಲಾ ಕಾಲೇಜು ಕಲಿಯುತ್ತಿರುವ/ವಿದ್ಯಾಭ್ಯಾಸ ಮುಗಿಸಿರುವ ಯುವತಿಯರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ತರಬೇತಿಯ ಅವಧಿಯಲ್ಲಿ ಅ್ಯರ್ಥಿಗಳಿಗೆ ಉಚಿ ಊಟ, ಉಪಹಾರ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖೈ ಮತ್ತು ವಿದ್ಯಾರ್ಹತೆಯನ್ನು ಬಿಳಿ ಹಾಳೆಯಲ್ಲಿ ಬರೆದು ಎ.13ರೊಳಗೆ ಭಾರತೀಯ ವಿಕಾಸ ಟ್ರಸ್ಟ್, ‘ಅನಂತ’, ಪೆರಂಪಳ್ಳಿ, ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ, ಉಡುಪಿ- 576 102, ಈ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿಕೊಡಬೇಕು. ಅಥವಾ ದೂರವಾಣಿ ಸಂಖ್ಯೆ:0820-2570263ನ್ನು ಸಂಪರ್ಕಿಸಿ ಭಾಗವಹಿಸು ವಿಕೆಯನ್ನು ದೃಢೀಕರಿಸಬಹುದು ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News