ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ: ಸಿಎಂ ಕುಮಾರಸ್ವಾಮಿ

Update: 2019-04-03 16:59 GMT

ಉಡುಪಿ, ಎ.3: ಕರ್ನಾಟಕದಲ್ಲಿ ಈ ಬಾರಿ ನರೇಂದ್ರ ಮೋದಿ ಅಲೆಯಿಲ್ಲ. ಮೋದಿ ಸರಕಾರ ಕರ್ನಾಟಕಕ್ಕೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಆದರೂ ಬಿಜೆಪಿಯವರು ಮೋದಿ ಹೆಸರಲ್ಲಿ ಓಟು ಕೇಳುತ್ತಿದ್ದಾರೆ. ಅವರಲ್ಲಿ ಬೇರೆ ಯಾವುದೇ ಬಂಡವಾಳ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಕುಂದಾಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಗೆ ಬರೀ ಮಾತಿನಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಈ ಬಾರಿ ಬಿಜೆಪಿ ಸೋಲನ್ನು ಸ್ವೀಕರಿಸಬೇಕಾಗಿದೆ. ಕರಾವಳಿಯಲ್ಲಿ ಮೂರೂ ಕ್ಷೇತ್ರಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಮಲತಾ ನಾಯ್ಡು ಎಂಬ ಸಂಸದ ಶಿವರಾಮ ಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾನು ಜಾತಿ ವ್ಯಾಮೋಹಕ್ಕೆ ಒಳಗಾಗುವುದಿಲ್ಲ. ನಾನು ಯಾರನ್ನು ಜಾತಿ ಆಧಾರದಲ್ಲಿ ನೋಡಿಲ್ಲ. ಜಾತಿ ವಿಚಾರದಲ್ಲಿ ಯಾರೇ ಮಾತಾಡಿದರೂ ತಪ್ಪುಎಂದು ಹೇಳಿದರು.

ಮಂಡ್ಯದಲ್ಲಿ ಯಾವುದೇ ಅಪಪ್ರಚಾರ ನಡೆದರೂ ನಿಖಿಲ್ ಗೆಲುವು ನಿಶ್ಚಿತ. ಭಾರೀ ಅಂತರದಿಂದಲೇ ನಾವು ಗೆಲ್ಲುತ್ತೇವೆ ಎಂದ ಅವರು, ಕನ್ನಡ ಚಾನೆಲ್ಗಳು ಮಂಡ್ಯದಲ್ಲಿ ಮಾತ್ರ ಚುನಾವಣೆ ಮಾತ್ರ ನಡೆಯುತ್ತಿರುವಂತೆ ಬಿಂಬಿಸುತ್ತಿದೆ ಎಂದರು.

ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಚುನಾವಣಾ ಸಮೀಕ್ಷೆಗಳು ಸುಳ್ಳು. ಮಾಧ್ಯಮದವರಿಗೆ 550 ಕೋ.ರೂ.ನ ಜಾಹೀರಾತು ನೀಡಲಾಗಿದೆ. ಆದ್ದರಿಂದ ನ್ಯೂಸ್ ಚಾನೆಲ್‌ಗಳಲ್ಲಿ ವಾಸ್ತವ ವಿವರಗಳು ಬರುತ್ತಿಲ್ಲ. ಕರ್ನಾಟಕದಲ್ಲಿ ಮೈತ್ರಿ ಪಕ್ಷವು 20ರಿಂದ 22 ಸೀಟು ಗೆಲ್ಲುವುದು ಖಚಿತ ಎಂದು ಕುಮಾರಸ್ವಾಮಿ ವಿಶ್ವಾಸದಿಂದ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News