ಟಿಕ್ ಟೋಕ್ ಆ್ಯಪ್ ಡೌನ್‌ಲೋಡ್ ನಿಷೇಧಿಸಿ: ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

Update: 2019-04-03 17:31 GMT

ಮಧುರೈ, ಎ. 3: ಟಿಕ್ ಟೋಕ್ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡುವುದನ್ನು ನಿಷೇಧಿಸಲು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಬುಧವಾರ ಕೇಂದ್ರ ಸರಕಾರಕ್ಕೆ ಮಧ್ಯಂತರ ನಿರ್ದೇಶನ ನೀಡಿದೆ.

ಟಿಕ್ ಟೋಕ್‌ನಂತಹ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಅಶ್ಲೀಲ ಚಿತ್ರಗಳು ಹಾಗೂ ಅನುಚಿತ ಅಂಶಗಳು ಲಭ್ಯವಾಗುತ್ತಿವೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಟಿಕ್ ಟೋಕ್‌ನಿಂದ ಮಾಡಿದ ವೀಡಿಯೊಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಕೂಡ ನ್ಯಾಯಮೂರ್ತಿಗಳಾದ ಎನ್. ಕಿರುಬಾಕರನ್ ಹಾಗೂ ಎಸ್.ಎಸ್. ಸುಂದರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.

ಸೈಬರ್‌ಗಳ ಬಲಿಪಶುವಾಗುವುದರಿಂದ ಮಕ್ಕಳನ್ನು ರಕ್ಷಿಸಲು ಅಮೆರಿಕದಲ್ಲಿ ಜಾರಿಗೆ ತರಲಾದ ಮಕ್ಕಳ ಆನ್‌ಲೈನ್ ಖಾಸಗಿತನ ರಕ್ಷಣಾ ಕಾಯ್ದೆಯಂತಹ ಕಾನೂನನ್ನು ಭಾರತದಲ್ಲಿ ಜಾರಿಗೆ ತರಬೇಕೇ ಎಂಬ ಬಗ್ಗೆ ಸರಕಾರ ಉತ್ತರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ವಿಚಲಿತಗೊಳಿಸುವ ವಿಚಾರ ಹಾಗೂ ಕೆಳ ದರ್ಜೆಯ ಸಂಸ್ಕೃತಿಯನ್ನು ಉತ್ತೇಜಿಸುವುದರಿಂದ ಈ ಆ್ಯಪ್ ಅನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯೊಂದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News