×
Ad

ನಾಟೆಕಲ್: ಗೂಡಂಗಡಿಗಳ ತೆರವು ಕಾರ್ಯಾಚರಣೆ

Update: 2019-04-05 23:17 IST

ಕೊಣಾಜೆ: ನಾಟೆಕಲ್ ಬಳಿ ರಸ್ತೆ ಬದಿಯಲ್ಲಿದ್ದ ಅನಧಿಕೃತ ಗೂಡಂಗಡಿಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು.

ಕಳೆದ ಕೆಲವು ದಿನಗಳ ಹಿಂದೆ ದೇರಳಕಟ್ಟೆ ಸಮೀಪ ರಸ್ತೆ ಬದಿಯಲ್ಲಿದ್ದ ಅನಧಿಕೃತ ಗೂಡಂಗಡಿ, ವ್ಯಾಪಾರ ಮಳಿಗೆಗಳನ್ನು ಪೊಲೀಸ್ ಇಲಾಖೆಯ ನೆರವಿ ನೊಂದಿಗೆ ಅಧಿಕಾರಿಗಳು ತೆರವುಗೊಳಿಸಿದ್ದರು. ಶುಕ್ರವಾರದಂದು ಮತ್ತೆ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಅನಧಿಕೃತ ವ್ಯಾಪಾರ ಮಳಿಗೆ ಹಾಗೂ ಗೂಡಂಗಡಿಗಳನ್ನು ತೆರವುಗೊಳಿಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ವ್ಯಾಪಾರಮಳಿಗೆಗಳ ಜಾಹಿರಾತು ಫಲಕಗಳನ್ನು ಕೂಡಾ ಜೆಸಿಬಿ ಮೂಲಕ ತೆಗೆದುಹಾಕಲಾಯಿತು.

22 ವರ್ಷದ ವ್ಯಾಪಾರಕ್ಕೆ ಬಿತ್ತು ಕುತ್ತು

ಕಳೆದ 22 ವರ್ಷಗಳಿಂದ ನಾಟೆಕಲ್ ರಸ್ತೆ ಬದಿಯಲ್ಲಿ ಗೂಡಂಗಡಿಯೊಂದಿಗೆ ಹೂವಿನ ವ್ಯಾಪಾರ ಮಾಡುತ್ತಾ ವ್ಯಾಪಾರಿಯೊಬ್ಬರು ಬದುಕನ್ನು ಕಟ್ಟಿ ಕೊಂಡಿದ್ದರು. ಆದರೆ ಶುಕ್ರವಾರ ಜೆಸಿಬಿ ಯಂತ್ರದೊಂದಿಗೆ ಅಧಿಕಾರಿಗಳು ಬಂದಾಗ ಅನಿವಾರ್ಯವಾಗಿ ಕಣ್ಣೀರಿನೊಂದಿಗೆ ತನ್ನ ಪತ್ನಿ ಮಕ್ಕಳು ಸೇರಿ ಅಂಗಡಿಯ ಸಾಮಾನುಗಳನ್ನು ಚೀಲಕ್ಕೆ ತುಂಬಿಸುತ್ತಾ ಅಂಗಡಿ ಖಾಲಿ ಮಾಡುತ್ತಿದ್ದ ದೃಶ್ಯ ಅಲ್ಲಿ ಸೇರಿದ್ದವರ ಮನಸ್ಸು ಕರಗುವಂತೆ ಮಾಡಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News