ಸುಬ್ರಹ್ಮಣ್ಯ :ಗುಡುಗು ಸಹಿತ ಭಾರೀ ಗಾಳಿ ಮಳೆಯೊಂದಿಗೆ ಆಲಿ ಕಲ್ಲಿನ ಸುರಿಮಳೆ

Update: 2019-04-05 18:21 GMT

ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಗುಡುಗು ಸಹಿತ ಭಾರೀ ಗಾಳಿ ಮಳೆಯೊಂದಿಗೆ ಆಲಿಕಲ್ಲಿನ   ಸುರಿಮಳೆಯಾಗಿದೆ.

ಅಲ್ಲದೇ ಗುಡುಗು ಸಹಿತ ಗಾಳಿಯೊಂದಿಗೆ ಸುರಿದ ಭಾರೀ ಮಳೆಗೆ ಜನತೆ ಭಯ ಭೀತರಾಗಿದ್ದಾರೆ . ಜೊತೆಗೆ ಹದಿನೈದು ನಿಮಿಷಗಳ ಕಾಲ ನಿರಂತರ ಸುರಿದ ಆಲಿಕಲ್ಲಿನ ಮಳೆ ಗೆ ಜನ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಮಳೆ ಬರುವ ಮುಂಚಿತವಾಗಿ ಬೀಸಿದ ಗಾಳಿಗೆ ಸುಬ್ರಹ್ಮಣ್ಯ ನೂಚಿಲ ಮನೆಯ ಮೇಲೆ ಬೃಹದಾಕಾರದ ಮರ ಬಿದ್ದು ಹಾನಿಯಾಗಿದೆ. ಆ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುಬ್ರಹ್ಮಣ್ಯ ಅಲ್ಲದೆ ಸುತ್ತಮುತ್ತಲ ಪ್ರದೇಶಗಳ ಕೆಲವು ಕೃಷಿ ತೋಟಗಳು ವಿಪರೀತ ಗಾಳಿಗೆ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News