ಯುನಿವೆಫ್ ಕರ್ನಾಟಕ: ಎ. 6ರಂದು ಉಳ್ಳಾಲದಲ್ಲಿ‌ ಯುವಕರೊಂದಿಗೆ ಸಂವಾದ ಕಾರ್ಯಕ್ರಮ

Update: 2019-04-05 18:24 GMT

ಉಳ್ಳಾಲ: "ಸಬಲೀಕೃತ ಸದೃಢ ಸಮುದಾಯಕ್ಕಾಗಿ, ಸುಶಿಕ್ಷಿತ ಸುರಕ್ಷಿತ ಸಚ್ಚರಿತ ಸಮಾಜಕ್ಕಾಗಿ ಯುನಿವೆಫ್ ಕರ್ನಾಟಕ" ಎಂಬ ಧ್ಯೇಯ ವಾಕ್ಯದೊಂದಿಗೆ ಮಾರ್ಚ್ 1 ರಿಂದ ಎಪ್ರಿಲ್ 7 ರ ತನಕ ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿರುವ  "ಬದಲಾವಣೆಗಾಗಿ ನಾನು" ಸದಸ್ಯತ್ವ ಅಭಿಯಾನದ ಅಂಗವಾಗಿ ಎ. 6 ರ ರಾತ್ರಿ 8.30ಕ್ಕೆ ಉಳ್ಳಾಲ ಮುಕ್ಕಚ್ಚೇರಿ‌ ನಿಮ್ರಾ ಮಸೀದಿ ಬಳಿ‌ ಇರುವ ಅಲ್ ವಹ್ದ ಇಸ್ಲಾಮಿಕ್ ಸೆಂಟರ್ ನಲ್ಲಿ‌ ಯುವಕರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಸಂಪನ್ಮೂಲ‌ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಉಳ್ಳಾಲ, ಕೋಟೆಪುರ, ಮುಕ್ಕಚ್ಚೇರಿ, ಮಾಸ್ತಿಕಟ್ಟೆ, ಅಳೇಕಲ, ತೊಕ್ಕೋಟು ಆಸುಪಾಸಿನ ಸಾರ್ವಜನಿಕರು ಹಾಗೂ ಯುನಿವೆಫ್ ಕರ್ನಾಟಕದ ಸದಸ್ಯರಾಗಲು ಬಯಸುವವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಉಳ್ಳಾಲ ಶಾಖಾಧ್ಯಕ್ಷ ಬಿ.ಎಂ. ಬದ್ರುದ್ದೀನ್ ಕರೆನೀಡಿದ್ದಾರೆ.

ಆಸಕ್ತರು ಬಿ.ಎಂ. ಬದ್ರುದ್ದೀನ್ 9448253719, ಯು.ಕೆ. ಖಾಲಿದ್ 9845199931 ಅಥವಾ ಅಬ್ದುಲ್ಲಾ ಪಾರೆ 9964024816 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News