ಫರಂಗಿಪೇಟೆ: ಹತ್ತು ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2019-04-07 12:35 GMT

ಫರಂಗಿಪೇಟೆ, ಎ. 7: ಮುಹಿಯ್ಯುದ್ದೀನ್ ಜುಮಾ ಮಸೀದಿ ಇದರ ಸಹಕಾರದೊಂದಿಗೆ ಖಿದ್ ಮತುಲ್ ಇಸ್ಲಾಂ ಎಸೋಸಿಯೇಶನ್ ಫರಂಗಿಪೇಟೆ ಇವರ ವತಿಯಿಂದ 6ನೇ ವರ್ಷದ 10 ಜೋಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಫರಂಗಿಪೇಟೆ ನೇತ್ರಾವತಿ ನದಿ ದಡದಲ್ಲಿ ನಡೆಯಿತು.

ಕುಂಪಣಮಜಲು ಅರಫಾ ಮಸೀದಿಯ ಖತೀಬ್ ಅಬ್ದುಲ್ ನಾಸಿರ್ ದಾರಿಮಿ ದುಆ ನಡೆಸಿದರು.

ಮುಖ್ಯ ಅತಿಥಿ ತ್ವಾಹಾ ಜುಮಾ ಮಸೀದಿ ಹತ್ತನೇ ಮೈಲುಕಲ್ಲು ಇದರ ಖತೀಬ್ ಜಾಫರ್ ಮಸ್ತಾನಿ ಮಾತನಾಡಿ, ವಿವಾಹದ ಹೆಸರಿನಲ್ಲಿ ನಡೆಯುವ ಅನಾಚಾರಗಳು ಒಂದು ಕಡೆಯಾದರೆ ಸಹಾಯಕ್ಕಾಗಿ ಅರ್ಜಿ ಕೈಯಲ್ಲಿಟ್ಟುಕೊಂಡು ಮಸೀದಿ ಮಸೀದಿ ಅಲೆದಾಡುವ ಪೋಷಕರು ಒಂದುಕಡೆ, ಇಂತಹ ಸಂದರ್ಭದಲ್ಲಿ ವರ್ಷಂಪ್ರತಿ ಖಿದ್ ಮತುಲ್ ಇಸ್ಲಾಂ ಎಸೋಶಿಯೇಶನ್ ನಡೆಸುವ ಸರಳ ಸಾಮೂಹಿಕ ವಿವಾಹವು ಮಹತ್ತರ ಕಾರ್ಯವಾಗಿದೆ ಎಂದು ಅವರು ಹೇಳಿದರು.

ಫರಂಗಿಪೇಟೆ ಮುಹೀದ್ದೀನ್ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಬಾವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತಾವಿಕ ವಾಗಿ ಮಾತನಾಡಿದ ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್  ಈವರೆಗೆ 59 ಜೋಡಿಗಳಿಗೆ ಸಾಮೂಹಿಕ ವಿವಾಹ ಈ ಸಂಘಟನೆಯ ಮೂಲಕ ನಡೆದಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಇಲ್ಲಿನ ಸಮಸ್ತ ಜನರ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಹಾಪೀಲ್ ಮಹಮ್ಮದ್ ರಂಝೀ ಕಿರಾಅತ್ ಪಠಿಸಿದರು. ವೇದಿಕೆಯಲ್ಲಿ ವಳಚ್ಚಿಲ್ ಜುಮಾ ಮಸೀದಿಯ ಗೌರವ ಅಧ್ಯಕ್ಷ ಝಫರುಲ್ಲಾ ಒಡೆಯರ್, ಬದ್ರಿಯಾ ಮಸೀದಿ ಖತೀಬ್ ಅಬುಸಾಲಿ ಪೈಝಿ, ಹಾಜಿ ಅಬ್ದುಲ್‌ ರಝಾಕ್ ಮಲೇಷಿಯಾ, ಫರಂಗಿಪೇಟೆ ಮದರಸದ ಸದರ್ ಮುಅಲ್ಲಿಮ್ ಇಸ್ಮಾಯಿಲ್, ಹಜಾಜ್ ಗ್ರೂಪ್ ಮಾಲಕ ಹನೀಫ್ ಹಾಜಿ ಗೋಳ್ತಮಜಲು, ನಂಡೆ ಪೆಂಗಲ್ ರುವಾರಿ ಮುಸ್ತಫಾ ಎಸ್.ಎಮ್, ಉದ್ಯಮಿ ಇಸ್ಮಾಯಿಲ್ ಕೆ.ಇ.ಇ.ಎಲ್, ಫರಂಗಿಪೇಟೆ ಮಸೀದಿ ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಂಕಾರ್, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾ.ಪಂ.ಮಾಜಿ‌ ಅಧ್ಯಕ್ಷ ಹನೀಫ್, ಹಿರಿಯರಾದ ಎಫ್.ಎ. ಖಾದರ್, ನೂರುಲ್ ಹುದಾ ಮದ್ರಸ ಕುಂಜತ್ಕಲ ಇದರ ಮಾಜಿ ಅಧ್ಯಕ್ಷ ಅಬೀದ್ ಆಲಿ, ಅರಫಾ ಗ್ರೂಪ್ ನ ಲತೀಫ್, ಸಲೀಂ ಟೈಲರ್ ಫರಂಗಿಪೇಟೆ, ಎಂ.ಎನ್. ಟಿ.ಟ್ರೇಡಿಂಗ್ ಕಂಪನಿಯ ಮಾಲಕ ಅಲ್ತಾಫ್ ಮೇಲ್ಮನೆ, ಅಬೂಬಕರ್, ಸಂಘಟನೆಯ ಪ್ರಮುಖರಾದ ಉಮ್ಮರ್ ಫಾರೂಕ್, ಮಹಮ್ಮದ್ ಬಾವ, ಯೂಸುಫ್ ಅಲಂಕಾರ್, ಎಫ್.ಎಮ್.ಬಶೀರ್, ಆಸೀಫ್ ಇಕ್ಬಾಲ್, ಮಜೀದ್ ಫರಂಗಿಪೇಟೆ ಉಪಸ್ಥಿತರಿದ್ದರು.

ಶಿಕ್ಷಕ ಮಹಮ್ಮದ್ ತುಂಬೆ, ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ಇಕ್ಬಾಲ್ ವಂದಿಸಿದರು.

ಮಹಮ್ಮದ್ ನೌಪಲ್ ಕೆಂಜಾರು ರಾಜಗುಡ್ಡೆ -  ಅಝ್ವೀನ ಕೊಜಪ್ಪಾಡಿ ಹರೆಕಳ, ಮಹಮ್ಮದ್ ಶಾಫಿ ಅಮ್ಲಮೊಗರು - ನಸೀಮಾ ತಿಲಕನಗರ ಅಮ್ಲಮೊಗರು, ಗಫಾರ್ ಬಾರಿಯಾ ಕಲ್ಲೇರಿ - ತಾಹೀರಾ ಕೊಯಿಲ, ಮಹಮ್ಮದ್ ಅನ್ಸಾರ್ ಫರಂಗಿಪೇಟೆ - ರಮ್ಝೀನತ್ ಸುಜೀರ್ ಕೊಡಂಗೆ, ಕಲಂದರ್ ಶಾಫಿ ಬಸ್ತಿಗುಡ್ಡೆ ಬೆಳ್ಳಾರೆ -ಆಶೀಕಾ ಕೊಡಿಂಬಾಡಿ, ಅಬ್ದುಲ್ ರಶೀದ್ ಸುಜೀರ್ ದೈಯಡ್ಕ- ಅನೀಶಾ ಸುಜೀರ್ ದೈಯಡ್ಕ, ಅಸ್ಲಾಂ ಪರ್ಲಡ್ಕ ಕಾಸರಗೋಡು- ವಹೀದಾ ಆಲಡ್ಕ ಪಾಣೆಮಂಗಳೂರು, ಇಸ್ಮಾಯಿಲ್ ಎಂ. ಕೊಯಿಲ ಉಪ್ಪಿನಂಗಡಿ -ನಸೀಮಾ ಬಾರಿಯಾ ಕಲ್ಲೇರಿ ಒಟ್ಟು ಹತ್ತು ಜೋಡಿ ಫರಂಗಿಪೇಟೆ ನದಿ ಕಿನಾರೆಯಲ್ಲಿ ಸರಳ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News