×
Ad

ಉಡುಪಿ ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷರಾಗಿ ಅಬೂಬಕ್ಕರ್ ನೇಜಾರು

Update: 2019-04-07 18:48 IST

ಉಡುಪಿ, ಎ.7: ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಇದರ ವಾರ್ಷಿಕ ಮಹಾಸಭೆಯು ಜಿಲ್ಲಾ ಖಾಝಿ ಪಿ.ಎಂ.ಇಬ್ರಾಹಿಮ್ ಮುಸ್ಲಿ ಯಾರ್ ಬೇಕಲ ನೇತೃತ್ವದಲ್ಲಿ ಶನಿವಾರ ಉಡುಪಿ ಲಯನ್ಸ್ ಭವನದಲ್ಲಿ ಜರಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಖಾಝಿ ಬೇಕಲ ಉಸ್ತಾದ್, ಇಸ್ಲಾಮಿಗೆ ವಿರುದ್ಧವಾದ ರೀತಿಯಲ್ಲಿ ಇಂದು ತಲಾಖ್, ನಿಖಾಹ್ ಮುಂತಾದ ವಿಷಯ ಗಳು ಬಹಳವಾಗಿ ನಡೆಯುತ್ತಿದ್ದು, ಖಾಝಿ ಮೂಲಕ ತೀರ್ಮಾನ ಮಾಡ ಬೇಕಾದ ಶರೀಅತ್‌ನ ಹಲವು ವಿಷಯಗಳಿಗೆ ಸಂಬಂಧಿಸಿ ಕೋರ್ಟು ಮೆಟ್ಟಿಲೇ ರುವ ಕಾರ್ಯಗಳು ಹೆಚ್ಚು ನಡೆಯುತ್ತಿವೆ. ಇಸ್ಲಾಮಿಗೆ ವಿರುದ್ಧವಾಗಿ ಯಾವುದೇ ಕಾರ್ಯಗಳು ನಡೆಸಬಾರದು. ಸಂಯುಕ್ತ ಜಮಾಅತ್ ಇದನ್ನು ಕಾರ್ಯಾ ಚರಣೆಗೊಳಿಸುವುದು ಬಹಳ ಅನಿವಾರ್ಯ ಎಂದು ಹೇಳಿದರು.

2019 -21ನೆ ಸಾಲಿನ ನೂತನ ಸಮಿತಿಯನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಖಾಝಿ ಇಬ್ರಾಹಿಮ್ ಮುಸ್ಲಿಯಾರ್ ಬೇಕಲ, ಗೌರವಧ್ಯಕ್ಷರಾಗಿ ಹಾಜಿ ಎನ್.ಅಬ್ದುಲ್ಲ ತೌಫೀಕ್ ನಾವುಂದ, ಅಧ್ಯಕ್ಷ ರಾಗಿ ಹಾಜಿ ಪಿ.ಅಬೂಬಕ್ಕರ್ ನೇಜಾರು, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಎಂ.ಎ.ಬಾವು ಮೂಳೂರು, ಕೋಶಾಧಿಕಾರಿಯಾಗಿ ಕರ್ಕಿ ಹಂಝ ಗುಲ್ವಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಸಂಚಾಲಕರಾಗಿ ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಉಪಾಧ್ಯಕ್ಷರು ಗಳಾಗಿ ಮನ್ಸೂರ್ ಮೆಕ್ಕಾಸ್ ಮೂಳೂರು, ಸರ್ದಾರ್ ಗುಲ್ವಾಡಿ, ಹುಸೈನ್ ಪುಚ್ಚೆಮೊಗೆರು, ಕಾರ್ಯದರ್ಶಿಗಳಾಗಿ ನಾಸೀರ್ ಮೂಡುಗೋಪಾಡಿ, ಎನ್. ಸಿ. ರಹೀಮ್ ಹೊಸ್ಮಾರು, ಇಬ್ರಾಹಿಮ್ ತವಕ್ಕಲ್ ಉಚ್ಚಿಲ ಹಾಗೂ ಸಂಯುಕ್ತ ಜಮಾಅತ್‌ಗೆ ಸೇರಿದ 80 ಮಸೀದಿಗಳಿಂದ ತಲಾ ಒಬ್ಬರಂತೆ ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News