×
Ad

ಉಡುಪಿ: ಕೃಷಿ ಮಾಹಿತಿ, ಕೃಷಿಕರಿಗೆ ಸಮ್ಮಾನ ಕಾರ್ಯಕ್ರಮ

Update: 2019-04-07 18:51 IST

ಉಡುಪಿ, ಎ.7: ಉಡುಪಿ ರೋಟರಿ ಮತ್ತು ಕರಂಬಳ್ಳಿ ರೋಟರಿ ಸಮು ದಾಯ ದಳದ ಜಂಟಿ ಆಶ್ರಯದಲ್ಲಿ ಕೃಷಿ ಮಾಹಿತಿ ಮತ್ತು ಕೃಷಿಕರಿಗೆ ಸಮ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಲಾಭದಾಯಕ ಕೃಷಿ ಮತ್ತು ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಸಣ್ಣ ಪ್ರದೇಶದಲ್ಲಿ ಯಶಸ್ವಿಯಾಗಿ ಕೃಷಿ ಮಾಡುವ ಬಗ್ಗೆ ವಿವರಿಸಿದರು. ಪೆರಂಪಳ್ಳಿ ಕೃಷಿಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಮತ್ತು ಕೃಷಿಕ ನಾಗೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಸಹಾಯಕ ರಾಜ್ಯಪಾಲ ಡಾ.ಗಣೇಶ್ ಮಾತನಾಡಿ ದರು. ಅಧ್ಯಕ್ಷತೆಯನ್ನು ಶ್ರೀನಿವಾಸ ಬಲ್ಲಾಳ್ ವಹಿಸಿದ್ದರು. ರೋಟರಿ ಸಮು ದಾಯ ದಳದ ನಿಯೋಜಿತ ಅಧ್ಯಕ್ಷ ಶ್ರೀಪತಿ ಭಟ್ ಸನ್ಮಾನಿತರನ್ನು ಪರಿಚಯಿಸಿ ದರು. ರೋಟರಿ ಉಡುಪಿ ಅಧ್ಯಕ್ಷ ಚಂದ್ರಶೇಖರ ಅಡಿಗ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಜನಾರ್ದನ ಭಟ್ ವಂದಿಸಿದರು. ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News