ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ
ಉಡುಪಿ, ಎ.7: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕುತ್ಪಾಡಿ ಜನತಾ ಕಾಲೋನಿಯ ವಿಜಯ್ (41) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಎ.6ರಂದು ರಾತ್ರಿ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ: ಸಿದ್ದಾಪುರದ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಆಜ್ರಿ ಗ್ರಾಮದ ಹೊಳೆಕೋಣು ನಿವಾಸಿ ರಾಮ ಪೂಜಾರಿ ಎಂಬವರ ಮಗ ಚಂದ್ರ ಪೂಜಾರಿ(24) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಎ.7ರಂದು ಬೆಳಗ್ಗೆ ಆಜ್ರಿ ಗ್ರಾಮದ ಹೊಳೆಕೋಣು ಎಂಬಲ್ಲಿ ವಿಷ ಸೇವಿಸಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಅಜೆಕಾರು: ವಿಪರೀತ ಕುಡಿತದ ಚಟ ಹೊಂದಿದ್ದ ಅಂಡಾರು ಗ್ರಾಮದ ರಾಮಗುಡ್ಡೆ ನಿವಾಸಿ ಬೊಲ್ಲ ಹಾಂಡ ಎಂಬವರ ಮಗ ಸಂಜೀವ ಮೂಲ್ಯ (48) ಎಂಬವರು ವೈಯಕ್ತಿಕ ಕಾರಣದಿಂದ ನೊಂದು ಜೀವನದಲ್ಲಿ ಜಿಗುಪ್ಸೆ ಗೊಂಡು ಎ.7ರಂದು ಬೆಳಿಗ್ಗೆ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.