2014ರ ಪ್ರಣಾಳಿಕೆಯನ್ನೇ ಕಾಪಿ-ಪೇಸ್ಟ್ ಮಾಡಿದ ಬಿಜೆಪಿ: ಕಾಂಗ್ರೆಸ್
Update: 2019-04-08 17:10 IST
ಹೊಸದಿಲ್ಲಿ, ಎ.8: ಬಿಜೆಪಿಯು ಇಂದು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಇದು 2014ರ ಪ್ರಣಾಳಿಕೆಯ ‘ಕಾಪಿ-ಪೇಸ್ಟ್’ ಎಂದು ಕಾಂಗ್ರೆಸ್ ಕುಹಕವಾಡಿದ್ದು, ಯೋಜನೆಗಳ ಕೊನೆಯ ದಿನಾಂಕಗಳನ್ನು ಮಾತ್ರ ಬದಲಿಸಲಾಗಿದೆ ಎಂದಿದೆ.
ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಬಿಜೆಪಿಯು ಪ್ರಣಾಳಿಕೆಯ ಬದಲು ಕ್ಷಮಾಪಣೆಯೊಂದಿಗೆ ಜನರ ಮುಂದೆ ಬರಬೇಕಿತ್ತು. ಮುಖಪುಟದಿಂದಲೇ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಣಾಳಿಕೆಯ ವ್ಯತ್ಯಾಸಗಳನ್ನು ತಿಳಿದುಕೊಳ್ಳಬಹುದು. ನಮ್ಮ ಪ್ರಣಾಳಿಕೆಯಲ್ಲಿ ಜನರ ಸಮೂಹವಿದೆ. ಆದರೆ ಬಿಜೆಪಿ ಪ್ರಣಾಳಿಕೆಯ ಮುಖಪುಟದಲ್ಲಿ ಒಬ್ಬ ವ್ಯಕ್ತಿಯ ಫೋಟೊ ಇದೆ” ಎಂದು ಹೇಳಿದರು.