×
Ad

ಚುನಾವಣೆ: ಮೀನುಗಾರಿಕಾ ಕಾರ್ಮಿಕರಿಗೆ ರಜೆ

Update: 2019-04-08 21:21 IST

ಉಡುಪಿ, ಎ.8: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎ.18 ಮತ್ತು 23ರಂದು ಚುನಾವಣೆ ನಡೆಯಲಿದ್ದು, ಈ ದಿನಗಳಂದು ಮೀನು ಗಾರಿಕಾ ದೋಣಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ/ ಕಲಾಸಿಗಳಿಗೆ ಮತದಾನ ಮಾಡಲು ಅನುಕೂಲವಾಗುವಂತೆ ರಜೆಯನ್ನು ನೀಡುವಂತೆ ಹಾಗೂ ಆಳಸಮುದ್ರ ಯಾಂತ್ರೀಕೃತ ದೋಣಿಗಳು ಮುಂಚಿತ ವಾಗಿ ಬಂದರಿಗೆ ಬಂದು ಮತದಾನ ದಿನಗಳಂದು ಎಲ್ಲಾ ಕಾರ್ಮಿಕರು ಮತದಾನದಲ್ಲಿ ಬಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಮೀನುಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News