ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಅಧಿಕಾರ ಸ್ವೀಕಾರ
Update: 2019-04-08 21:29 IST
ಉಡುಪಿ, ಎ.8: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಮೊಹಮ್ಮದ್ ನಝೀರ್ ಅಧಿಕಾರ ವಹಿಸಿಕೊಂಡಿದ್ದಾರೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ವೈಯಕ್ತಿಕ ಗಮನಕ್ಕೆ ತರುವಂತಹ ಪತ್ರಗಳು ಹಾಗೂ ಅರೆ ಸರಕಾರಿ ಪತ್ರಗಳನ್ನು ಮೊಹಮ್ಮದ್ ನಝೀರ್, ಆಯುಕ್ತರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ ಮಲ್ಪೆ ಮೈನ್ ರೋಡ್, ಆದಿ ಉಡುಪಿ, ದೂರವಾಣಿ ಸಂಖ್ಯೆ: 0820-2525307, 0820-2522606 ಇವರಿಗೆ ಕಳುಹಿಸಿಕೊಡುವಂತೆ ಪ್ರಕಟಣೆ ತಿಳಿಸಿದೆ.