ಕಾಪು ಕಡಲ ಕಿನಾರೆಯಲ್ಲಿ ಮತದಾನ ಜಾಗೃತಿ

Update: 2019-04-08 16:24 GMT

ಉಡುಪಿ, ಎ.8: ರವಿವಾರ ಸಂಜೆ ಪ್ರವಾಸಿಗರಿಂದ ತುಂಬಿದ್ದ ಕಾಪು ಕಡಲ ಕಿನಾರೆಯಲ್ಲಿ ಜಿಲ್ಲಾ ಸ್ವಿಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ನೆರೆದಿದ್ದ ಸಾರ್ವಜನಿಕರಲ್ಲಿ ಮತದಾನದ ಕುರಿತಂತೆ ಅರಿವು ಮೂಡಿಸಿತು.

ಕಾಪು ಬೀಚ್‌ನಲ್ಲಿ ವಿಶೇಷ ಕೌಂಟರ್ ತೆರೆದು ಇವಿಎಂ ಮತ್ತು ವಿವಿಪ್ಯಾಟ್ ನಲ್ಲಿ ಮತದಾನ ಪ್ರಾತ್ಯಕ್ಷಿಕೆ ನಡೆಸಲಾಯಿತು. ಪ್ರವಾಸಿಗರಿಗೆ ಮತದಾನದ ಮಹತ್ವವನ್ನು ತಿಳಿಸಲಾಯಿತು. ಮತದಾನದ ಸಂದೇಶವನ್ನೊಳಗೊಂಡ ಬೀದಿನಾಟಕವನ್ನು ಗಿರೀಶ್ ನಾವಡ ಮತ್ತವರ ತಂಡ ನಡೆಸಿಕೊಟ್ಟಿತು.

ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಕೃಷ್ಣ ಕುನಾಲ್ ಅವರು ಚಂಡೆ ಬಾರಿಸಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಟಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ರೂಪೇಶ್, ಪುರಸಭೆ ಮುಖ್ಯಾಧಿಕಾರಿ ರಾಯಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಕೃಷ್ಣ ಕುನಾಲ್ ಅವರು ಚಂಡೆ ಬಾರಿಸಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಟಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ರೂಪೇಶ್,ಪುರಸೆ ಮುಖ್ಯಾಧಿಕಾರಿ ರಾಯಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೆರೆದವರಿಗೆ ಮತದಾನ ಮಾಡುವ ಪ್ರತಿಜ್ಞೆ ಬೋಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News