ಸಮ್ಮಿಶ್ರ ಸರ್ಕಾರದ ಅನ್ಯಾಯಕ್ಕೆ ಚುನಾವಣೆಯಲ್ಲಿ ಉತ್ತರ : ವಿ.ಸುನೀಲ್ ಕುಮಾರ್
ಮೂಡುಬಿದಿರೆ: ಈ ಸಮ್ಮಿಶ್ರ ಸರಕಾರ ಕರಾವಳಿ ಜಿಲ್ಲೆಗಳಿಗೆ ಮಾಡಿದ್ದೇ ಅನ್ಯಾಯ. ಬಜೆಟ್ ಮಂಡನೆ ಆದಾಗ ಕರಾವಳಿಯ ಜಿಲ್ಲೆಗಳ ಬಗ್ಗೆ ಒಂದು ಶಬ್ದ ಉಲ್ಲೇಖಿಸದ ಮುಖ್ಯಮಂತ್ರಿಯವರ ಬಜೆಟ್ ಬಗ್ಗೆ ನಾವು ಕರಾವಳಿಯ ಬಿಜೆಪಿ ಶಾಸಕರುಸದನದ ಒಳಗೆ, ಹೊರಗೆ ಪ್ರತಿಭಟಿಸಿದ್ದೆವು. ನಂತರದ ದಿನಗಳಲ್ಲಿ ಕರಾವಳಿಯ ಜನತೆಗೆ ತಿಳುವಳಿಕೆ ಇಲ್ಲ ಎಂದವರು ಈಗ ಕರಾವಳಿ ಜಿಲ್ಲೆಗೆ ಮತ ಕೇಳಲು ಬಂದಿದ್ದಾರೆ. ಈ ಅನ್ಯಾಯದ ವಿರುದ್ಧ ಜಿಲ್ಲೆಯ ಜನ ಸಮರ್ಥವಾಗಿ ಉತ್ತರಿಸಲಿದ್ದಾರೆ ಎಂದು ದ.ಕ ಜಿಲ್ಲಾ ಚುನಾವಣಾ ಪ್ರಭಾರಿ ಶಾಸಕ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ಅವರು ಮೂಡುಬಿದಿರೆ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು. ಈ ಚುನಾವಣೆ ಸಮರ್ಥ ನೇತೃತ್ವ ಹಾಗೂ ದೂರದರ್ಶಿತ್ವದ ಕೊರತೆ ಇರುವ ನೇತೃತ್ವದ ಇವೆರಡರ ನಡುವಿನ ಆಯ್ಕೆ ಎಂದ ಅವರು ಕಳೆದ 5 ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ಯಶಸ್ಸಿನ ಆಡಳಿತ ನೀಡಿದ ಮೋದಿ ನವ ಭಾರತ ನಿರ್ಮಾಣಕ್ಕಾಗಿ ರೈತಪರ ದೂರದೃಷ್ಠಿಯ ಪ್ರಣಾಳಿಕೆ ಜನತೆಯ ಮುಂದಿಟ್ಟಿದ್ದಾರೆ. ಎ13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಮೋದಿಯವರು ಪಾಲ್ಗೊಳ್ಳಲಿರುವ ಸಭೆಗೆ ಮೂಡುಬಿದಿರೆ ಕ್ಷೇತ್ರದಿಂದ 15 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದರು.
ಮಂಡಲ ಅಧ್ಯಕ್ಷ ಈಶ್ವರ ಕಟೀಲ್, ವಿಭಾಗ ಸಹ ಪ್ರಭಾರಿ ಪ್ರತಾಪ ಸಿಂಹ ನಾಯಕ್, ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾ ಕ್ಷೇತ್ರ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರ್ಳೆ ಉಪಸ್ಥಿತರಿದ್ದರು.