×
Ad

ಶಿರೂರಿನ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್, ಕಾಲೇಜಿಗೆ 'ಐಸಿಎಸ್‌ಇ' ಪ್ರಶಸ್ತಿ

Update: 2019-04-08 23:08 IST

ಮಂಗಳೂರು, ಎ.8: ಪ್ರೈಮ್ ಟೈಮ್ ಮೀಡಿಯಾ ರವಿವಾರ ಮುಂಬೈಯಲ್ಲಿ ಆಯೋಜಿಸಿದ್ದ '7ನೇ ಜಾಗತಿಕ ಶಿಕ್ಷಣ ಉತ್ಕೃಷ್ಟತೆ ಪ್ರಶಸ್ತಿಗಳು 2019' ಕಾರ್ಯಕ್ರಮದಲ್ಲಿ ಶಿರೂರಿನ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿಗೆ ಕರ್ನಾಟಕದ ಅತ್ಯಂತ ಭರವಸೆಯ 'ಐಸಿಎಸ್‌ಇ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ಗ್ರೀನ್ ವ್ಯಾಲಿ ಸಂಸ್ಥೆ ನೀಡಿದ ಕಾಣಿಕೆಯನ್ನು ಗುರುತಿಸಿ ಪ್ರೈಮ್ ಟೈಮ್ ಮೀಡಿಯಾ ಈ ಪ್ರಶಸ್ತಿಯನ್ನು ಘೋಷಿಸಿದೆ.  ಶಿಕ್ಷಣ ಕ್ಷೇತ್ರದ ದಿಗ್ಗಜರ  ಕೂಡುವಿಕೆಯಂತಿದ್ದ ಪ್ರಶಸ್ತಿ ಸಮಾರಂಭದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಭಾರತೀಯ ನಟಿ ಮತ್ತು ಮಾಡೆಲ್ ಮುಗ್ಧಾ ಗೋಡ್ಸೆ ಮತ್ತು ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರ ಬ್ರಾಡ್ ಹಾಗ್ ಅವರು ಪ್ರಶಸ್ತಿಯನ್ನು ನೀಡಿದರು. 
ಸಮ್ಮೇಳನಲ್ಲಿ ಡಿಜಿಟಲ್ ಕಲಿಕೆ ಬಗ್ಗೆ ದಿಕ್ಸೂಚಿ ಭಾಷಣ ಮಾಡಲು ಗ್ರೀನ್ ವ್ಯಾಲಿಯ ಪ್ರಾಂಶುಪಾಲರನ್ನು ಆಯ್ಕೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News