×
Ad

ಜಡ್ಡಿನಗುಡ್ಡೆ ಎಎನ್‌ಎಫ್ ಕೇಂದ್ರಕ್ಕೆ ಡಿಸಿ, ಎಸ್ಪಿ ಭೇಟಿ

Update: 2019-04-09 19:04 IST

ಕುಂದಾಪುರ, ಎ.9: ಚುನಾವಣಾ ಸಂಬಂಧ ಅಕ್ರಮ ತಡೆಗಟ್ಟಲು ಶಿರೂರಿ ನಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್‌ಗೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಖುದ್ದು ತಾವೇ ವಾಹನಗಳ ತಪಾಸಣೆ ನಡೆಸಿದರು.

ನಂತರ ಅಮಾಸೆಬೈಲುಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಮೀಪದ ರಿಕ್ಷಾ ನಿಲ್ದಾಣದಲ್ಲಿನ ರಿಕ್ಷಾ ಚಾಲಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಿ ದರು. ಅಲ್ಲದೆ ಜಡ್ಡಿನಗುಡ್ಡೆಯ ಎ.ಎನ್.ಎಫ್. ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಂದಾಪುರ ತಾಲೂಕಿನ ಸೂಕ್ಷ್ಮ ಮತಗಟ್ಟೆಗಳಿಗೆ ತೆರಳಿದ ಅವರು, ರಟ್ಟಾಡಿಯಲ್ಲಿ ಸಾರ್ವಜನಿಕರಿಗೆ ವೋಟರ್ ಸ್ಲಿಪ್‌ಗಳನ್ನು ವಿತರಿಸಿದರು. ಇವರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News