×
Ad

ಉಡುಪಿ: ಮಕ್ಕಳ ಹಕ್ಕುಗಳ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಆಗ್ರಹ

Update: 2019-04-09 19:06 IST

ಉಡುಪಿ, ಎ.9: ಲೋಕಸಭಾ ಚುನಾವಣೆ ಸ್ಪರ್ಧಿಸಿರುವ ಎಲ್ಲಾ ಪಕ್ಷದ ಪ್ರಣಾಳಿಕೆಯಲ್ಲಿ ಮಕ್ಕಳ ಹಕ್ಕುಗಳ ಬೇಡಿಕೆಗಳನ್ನು ಸೇರಿಸಿಕೊಳ್ಳುವಂತೆ ಪಕ್ಷದ ಅ್ಯರ್ಥಿಗಳು ಮತ್ತು ಅಧ್ಯಕ್ಷರಲ್ಲಿ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ(ಪಾಫ್ರೆ) ಉಡುಪಿ ಜಿಲ್ಲೆ ಇದರ ಮೂಲಕ ಒತ್ತಾಯಿಸಲು ನಿರ್ಧರಿಸಲಾಯಿತು.

ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ಎ.8ರಂದು ಪಾಫ್ರೆ ಸಭೆಯಲ್ಲಿ ಸ್ಥಳೀಯ ಅ್ಯರ್ಥಿಗಳನ್ನು ಭೇಟಿ ಮಾಡಿ ಲಿಖಿತ ರೂಪದಲ್ಲಿ ಖಾತರಿಪಡಿ ಸುವುದು ಹಾಗೂ ಮತದಾರರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಅ್ಯರ್ಥಿ ಗಳ ಜೊತೆ ಜನಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.

ಸಿಎಸಿಎಲ್ ಸಂಚಾಲಾಕ ರೆನ್ನಿ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದ ಆಯೋಗದ ಶಿಪಾರಸ್ಸಿನಂತೆ ದೇಶದ ಒಟ್ಟು ಉತ್ಪನ್ನದಲ್ಲಿ ಶೇ.6 ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಹುಟ್ಟಿನಿಂದ 18 ವರ್ಷದ ಎಲ್ಲ ಮಕ್ಕಳಿಗೆ ಆರೈಕೆ ಯನ್ನು ಸಮಾನ ಗುಣ ಮಟ್ಟದ ಶಿಕ್ಷಣವನ್ನು ಮಾತೃಬಾಷೆ/ ಪ್ರಾದೇಶಿಕ ಭಾಷೆಯಲ್ಲಿ ನೆರೆಹೊರೆಯ ಸಮಾನ ಶಾಲೆ/ಶಿಶು ಪಾಲನಾ ಕೇಂದ್ರಗಳಲ್ಲಿ ಒದಗಿಸಬೇಕು.

ಶಿಕ್ಷಣ ಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡುವ ಮೂಲಕ ಆರಂಭಿಕ ಮಕ್ಕಳ ಅಭಿವೃದ್ದಿ, ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಪ್ರೌಢ ಶಿಕ್ಷಣವನ್ನು ಅಂತಾರಾಷ್ಟ್ರೀಯ ಕಾನೂನುಗಳ ಚೌಕಟ್ಟು ಮತ್ತು ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದಿ ಗುರಿಗಳಿಗೆ ಅನುಗುಣವಾಗಿ ಕಾನೂನು ಬದ್ಧ ಹಕ್ಕನ್ನಾಗಿಸಬೇಕು.
ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಮತ್ತು ಸರಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ/ವಿಲೀನಗೊಳಿಸುವ ಪ್ರಕ್ರಿಯೆಯನ್ನು ಪೂರ್ಣ ವಾಗಿ ನಿಲ್ಲಿಸಬೇಕು. ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪರೀಕರಣವನ್ನು ಪೂರ್ಣವಾಗಿ ನಿಯಂತ್ರಿಸಬೇಕು ಈ ಎಲ್ಲ ಬೇಡಿಕೆಗಳನ್ನು ಪ್ರಾಣಾಳಿಕೆಯಲ್ಲಿ ಸೇರಿಸೇಕು ಎಂದು ಅವರು ಆಗ್ರಹಿಸಿದರು.

ಸಭೆಯಲ್ಲಿ ಜಿಲ್ಲೆಯ ಪಾಫ್ರೆ, ಜಿಲ್ಲಾ ಶಿಕ್ಷಣ ಸಂನ್ಮೂಲ ಕೇಂದ್ರ, ಎಸ್‌ಡಿಎಂಸಿ ಸಮನ್ವಯ ವೇದಿಕೆ, ಕಟ್ಟಡ ಕಾರ್ಮಿಕ ಸಂಘಟನೆ, ಬಿಸಿಯೂಟ ಸಂಘಟನೆ, ರೈತ ಸಂಘ, ಗಾರ್ಡ್ ಸಂಸ್ಥೆ, ಅಥರ್ವ ಸಂಸ್ಥೆ, ಸ್ವಸಹಾಯ ಸಂಘದ ಪದಾಧಿಕಾರಿ ಗು ಹಾಗೂ ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News