ಉಡುಪಿ: ವಾಹನಗಳಲ್ಲಿನ ರಾಜಕೀಯ ಸ್ಟಿಕ್ಕರ್ ತೆರವು ಕಾರ್ಯಾಚರಣೆ
Update: 2019-04-09 20:29 IST
ಉಡುಪಿ, ಎ.9: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಯಲ್ಲಿ ಸುಮಾರು 10ಕ್ಕೂ ಅಧಿಕ ವಾಹನಗಳಲ್ಲಿ ಅಂಟಿಸಲಾದ ರಾಜಕೀಯ ಪ್ರೇರಿತ ಸ್ಟಿಕ್ಕರ್‌ಗಳನ್ನು ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದ್ದಾರೆ.
ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ ವಠಾರದಲ್ಲಿದ್ದ ಮೂರು ವಾಹನಗಳಲ್ಲಿ ಅಂಟಿಸಿದ ಬರಹಗಳನ್ನು ಅಧಿಕಾರಿಗಳು ವಾಹನ ಚಾಲಕ ರಿಂದಲೇ ತೆರವುಗೊಳಿಸಿದ್ದಾರೆ. ಅದೇ ರೀತಿ ಉಡುಪಿ ವಿಧಾನಸಭಾ ಕ್ಷೇತ್ರದ ಇತರೆಡೆಗಳಲ್ಲಿ ತಪಾಸಣಾ ತಂಡಕ್ಕೆ ಸಿಕ್ಕಿಬಿದ್ದ ಸುಮಾರು 8 ವಾಹನಗಳಲ್ಲಿದ್ದ ಸ್ಟಿಕ್ಕರ್ ಮತ್ತು ಬರಹಗಳನ್ನು ತೆರವುಗೊಳಿಸಲಾಗಿದೆ.
ಕಾರ್ಯಾಚರಣೆ ಮುಂದುವರಿಸಲಾಗಿದ್ದು, ವಾಹನಗಳಲ್ಲಿ ಯಾವುದೇ ರೀತಿಯ ಸ್ಟಿಕ್ಕರ್ ಅಥವಾ ಬರಹ ಕಂಡು ಬಂದರೆ ಅಂತಹ ವಾಹನಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಜಪ್ತಿ ಮಾಡಿ, ನಿರ್ದಾಕ್ಷಿಣ್ಯ ಕ್ರಮ ಜರುಗಿಸ ಲಾಗುವುದು ಎಂದು ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ಭಾಸ್ಕರ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.