ಉಡುಪಿ: ಮತದಾನ ಜಾಗೃತಿ ವಸ್ತು ಪ್ರದರ್ಶನ ಉದ್ಘಾಟನೆ
Update: 2019-04-09 20:34 IST
ಉಡುಪಿ, ಎ.9: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಭಾಂಗಣದ ಬಳಿ ಮತದಾನದ ಮಹತ್ವ ಕುರಿತು ಹಮ್ಮಿಕೊಳ್ಳಲಾದ ಮೂರು ದಿನಗಳ ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಂಗಳವಾರ ಉದ್ಘಾಟಿಸಿದರು.
ಮತದಾನದ ಮಹತ್ವ ಕುರಿತಂತೆ ಜಾಗೃತಿ ಮೂಡಿಸುವ ಆಕರ್ಷಕ ವಸ್ತು ಪ್ರದರ್ಶನ ಇದಾಗಿದ್ದು, ಸೀ ವಿಜಿಲ್, ಹಿರಿಯ ನಾಗರೀಕರಿಗೆ ಮತದಾನ ಸಂದರ್ಭ ದೊರೆಯುವ ಸೌಲಭ್ಯಗಳು, ಮತದಾರರ ಸಹಾಯವಾಣಿ, ಆಮಿಷಗಳಿಗೆ ಬಲಿಯಾಗದಂತೆ ಕುರಿತ ವ್ಯಂಗ್ಯಚಿತ್ರಗಳು ಮುಂತಾದ ವಿಷಯ ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಚುನಾವಣಾ ವೆಚ್ಚ ವೀಕ್ಷಕ ಸಚಿನ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಮೊದಲಾದ ವರು ಉಪಸ್ಥಿತರಿದ್ದರು.