×
Ad

ಕುಂದಾಪುರ: ಗುರುತು ಚೀಟಿ, ವೋಟರ್ ಸ್ಲಿಪ್ ಪರಿಶೀಲನೆ

Update: 2019-04-09 20:36 IST

ಕುಂದಾಪುರ, ಎ.9: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಎಲ್‌ಓ ಮೂಲಕ ಹೊಸದಾಗಿ ಸೇರ್ಪಡೆಗೊಂಡ ಮತದಾರರಿಗೆ ಗುರುತು ಚೀಟಿ ಹಾಗೂ ಮತದಾರರಿಗೆ ವೋಟರ್ ಸ್ಲಿಪ್ ವಿತರಣೆ ನಡೆಸುತ್ತಿರುವ ಕುರಿತು ಕುಂದಾಪುರ ಸಹಾಯಕ ಚುನಾವಣಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ ಎ.8ರಂದು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.

ಗುರುತು ಚೀಟಿ ಹಾಗೂ ವೋಟರ್ ಸ್ಲಿಪ್ ವಿತರಣೆಯು ಪೂರ್ಣಗೊಳ್ಳದ ಬಿಎಲ್‌ಓಗಳನ್ನು ತರಾಟೆಗೆ ತೆಗೆದುಕೊಂಡ ಅವರು, ತಕ್ಷಣವೇ ವೋಟರ್ ಸ್ಲಿಪ್ ಹಂಚಿಕೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಈ ಸಂದರ್ದಲ್ಲಿ ಮತದಾರರಿಗೆ ಬಿಎಲ್‌ಓಗಳು ನೀಡಿದ ಓಟರ್ ಸ್ಲಿಪ್‌ಅನ್ನು ಮತದಾನ ಪ್ರಕ್ರಿಯೆಯಲ್ಲಿ ಗುರುತು ಚೀಟಿಯನ್ನಾಗಿ ಬಳಕೆ ಮಾಡಲು ಅವಕಾಶ ಇಲ್ಲದೇ ಇರುವುದರಿಂದ ಚುನಾವಣಾ ಗುರುತುಚೀಟಿ(ಎಪಿಕ್) ಹಾಗೂ ಚುನಾವಣಾ ಆಯೋಗ ನಿರ್ದೇಶಿಸಿದ ಇನ್ನಿತರ ಹನ್ನೊಂದು ದಾಖಲೆಗಳನ್ನು ಬಳಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಅಲ್ಲದೇ ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ದಿನದ 24 ಗಂಟೆ ನಿರ್ವಹಿಸುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08254-298058 ಹಾಗೂ ಟೋಲ್ ಫ್ರೀ ನಂಬರ್ 1950ಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಡಾ.ಎಸ್.ಎಸ್.ಮಧುಕೇಶ್ವರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News