ಆನ್‌ಲೈನ್ ನಿಂದನೆಗೆ ಜಾಲತಾಣಗಳ ಮುಖ್ಯಸ್ಥರೇ ಹೊಣೆ: ಬ್ರಿಟನ್

Update: 2019-04-09 16:50 GMT

ಲಂಡನ್, ಎ. 9: ಸಾಮಾಜಿಕ ಜಾಲತಾಣದಲ್ಲಿ ಆನ್‌ಲೈನ್ ನಿಂದನೆ ಮತ್ತು ಅಪರಾಧಗಳು ವ್ಯಾಪಿಸುತ್ತಿರುವುದನ್ನು ನಿಭಾಯಿಸಲು, ಬ್ರಿಟನ್ ಸೋಮವಾರ ನೂತನ ನಿಯಮಗಳನ್ನು ಪ್ರಕಟಿಸಿದೆ. ಇದರ ಪ್ರಕಾರ, ಜಾಲತಾಣಗಳಲ್ಲಿ ಪ್ರಸಾರವಾಗುವ ಅಹಿತಕರ ಸಂದೇಶಗಳಿಗೆ ನಿರ್ದಿಷ್ಟ ಜಾಲತಾಣಗಳ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸಲಾಗುವುದು ಹಾಗೂ ಅಂಥ ಮಾಧ್ಯಮಗಳನ್ನು ಮುಚ್ಚಲಾಗುವುದು.

ಕುತೂಹಲದಿಂದ ಕಾಯಲಾಗುತ್ತಿದ್ದ ನೂತನ ಪ್ರಸ್ತಾಪಗಳು ಭಾರೀ ವಿಳಂಬವಾಗಿ ಹೊರಬಿದ್ದಿವೆ. ಮುಂದಿನ ತಿಂಗಳುಗಳಲ್ಲಿ ಇವುಗಳಿಗೆ ಸಂಬಂಧಿಸಿದ ಮಸೂದೆಗಳು ಸಂಸತ್‌ನಲ್ಲಿ ಅಂಗೀಕಾರಗೊಳ್ಳಬಹುದಾಗಿದೆ.

ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ಮುಂತಾದ ಸಾಮಾಜಿಕ ಮಾಧ್ಯಮಗಳ ದೈತ್ಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನೂತನ ನಿಯಮಗಳನ್ನು ಜಾರಿಗೆ ತರಲಾಗಿದೆ.

ಇದೇ ರೀತಿಯ ಮಸೂದೆಯೊಂದನ್ನು ಆಸ್ಟ್ರೇಲಿಯ ಕಳೆದ ವಾರ ಜಾರಿಗೆ ತಂದಿರುವುದನ್ನು ಸ್ಮರಿಸಬಹುದಾಗಿದೆ. ಭಯೋತ್ಪಾದನೆ ಅಥವಾ ಇತರ ಹಿಂಸಾತ್ಮಕ ಘಟನೆಗಳ ವೀಡಿಯೊಗಳನ್ನು ಕ್ಷಿಪ್ರವಾಗಿ ಆನ್‌ಲೈನ್‌ನಿಂದ ತೆಗೆಯಲು ವಿಫಲವಾಗುವ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವವನ್ನು ಹೊಂದಿರುವ ಮಸೂದೆಯನ್ನು ಅದು ಅಂಗೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News