×
Ad

ಮಂಗಳೂರು: ಎ.13ರಂದು ‘ಐ ಝೋನ್’ ಉದ್ಘಾಟನೆ

Update: 2019-04-09 22:30 IST

ಮಂಗಳೂರು, ಎ.9: ನಗರದ ಸಿಟಿಸೆಂಟರ್‌ನ ಸ್ಪಾರ್ ಸೂಪರ್ ಮಾರ್ಕೆಟ್‌ ಸಮೀಪ ಎ.13ರಂದು ಬೆಳಗ್ಗೆ 11 ಗಂಟೆಗೆ ಪ್ರತಿಷ್ಠಿತ ‘ಐ ಝೋನ್’ ಆಪ್ಟಿಕಲ್ ಆ್ಯಂಡ್ ಸನ್‌ಗ್ಲಾಸ್ ಮಳಿಗೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ನೂತನ ಮಳಿಗೆಯನ್ನು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಬಿಸಿಸಿಐ)ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಕೆಸಿಸಿಐ) ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಸ್ಟಾನಿ ಅಲ್ವಾರಿಸ್, ಮಂಗಳೂರಿನ ಬಿಎನ್‌ಐ ಇನ್‌ಸ್ಪೈರ್ ಚಾಪ್ಟರ್‌ನ ಅಧ್ಯಕ್ಷ ಮಹೇಶ್ ಕಾಮತ್ ಪಿ., ಬಿಎನ್‌ಐ ಯೂನಿಕ್ ಚಾಪ್ಟರ್‌ನ ಅಧ್ಯಕ್ಷ ಶಂಸುದ್ದೀನ್ ಭಾಗವಹಿಸಲಿದ್ದಾರೆ ಎಂದು ‘ಐ ಝೋನ್’ ಮ್ಯಾನೇಜಿಂಗ್ ಪಾರ್ಟ್ನರ್ ಮುಹಮ್ಮದ್ ರಫೀಕ್ ಕೃಷ್ಣಾಪುರ, ಬಿಸಿನೆಸ್ ಡೆವಲಪರ್ ಅಬ್ದುಲ್ ನಾಸಿರ್ ಚಾಬು ಕುದ್ರೋಳಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News