×
Ad

ಕೈಕಂಬದಲ್ಲಿ ಎಸ್.ಡಿ.ಪಿ.ಐ. ಚುನಾವಣಾ ಪ್ರಚಾರ ಸಭೆ

Update: 2019-04-09 22:41 IST

ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಹಮ್ಮದ್ ಇಲಿಯಾಸ್ ಪರ ಚುನಾವಣಾ ಪ್ರಚಾರ ಸಭೆಯು ಕೈಕಂಬ ಜಂಕ್ಷನ್ ನಲ್ಲಿ ನಡೆಯಿತು.

ಎಸ್ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬೂಬಕರ್ ವಾಮಂಜೂರು ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಪಿಐ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಭೆಯನ್ನು ಉದ್ದೇಶಿಸಿ ಪಿಎಪ್ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ಪಿಎಪ್ಐ ರಾಜ್ಯದ್ಯಕ್ಷ ಮುಹಮ್ಮದ್‌ ಶಾಕೀಬ್ , ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಮಜೀದ್ ಖಾನ್, ಎಸ್ಡಿಪಿಐ ಲೋಕಸಭಾ ಅಭ್ಯರ್ಥಿ ಮುಹಮ್ಮದ್ ಇಲ್ಯಾಸ್ ತುಂಬೆ ಮಾತನಾಡಿದರು.

ಕಾರ್ಯ ಕ್ರಮದಲ್ಲಿ ಎಸ್ಡಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಜಲೀಲ್ ಕ್ರಷ್ಣಾಪುರ ,ಎಸ್ಡಿಪಿಐ ಜಲ್ಲಾ ಉಪಾಧ್ಯಕ್ಷ ಐಎಂಆರ್ ಇಕ್ಬಾಲ್, ಮಂಗಳೂರು ಮಹಾನಗರ ಪಾಲಿಕೆ ಸದ್ಯಸ ಅಯಾಝ್ ,  ಎಸ್ಡಿಪಿಐ ಜಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಕುಳಾಯಿ, ಕೋಶಾಧಿಕಾರಿ ನೂರುಲ್ಲಾ ಕುಳಾಯಿ ಉಪಸ್ಥಿತರಿದ್ದರು.

ಅಸ್ತಾರ್ ಅಡ್ಡೂರ್ ಸ್ವಾಗತಿಸಿ,  ಇಕ್ಬಾಲ್ ವಾಮಂಜೂರು ವಂದಿಸಿದರು. ಕಾರ್ಯಕ್ರಮ ಆರಂಭವಾಗುವ ಮೊದಲು ಕೈಕಂಭ ಪೇಟೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಮಹಮ್ಮದ್ ಇಲಿಯಾಸ್ ಮತ ಯಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News