ಇರಾನ್ ಸೇನೆ ವಿದೇಶಿ ಉಗ್ರ ಸಂಘಟನೆ ಎಂಬುದಾಗಿ ಘೋಷಿಸಿದ ಅಮೆರಿಕ

Update: 2019-04-09 17:18 GMT

ವಾಶಿಂಗ್ಟನ್, ಎ. 9: ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ವಿದೇಶಿ ಭಯೋತ್ಪಾದಕ ಸಂಘಟನೆ ಎಂಬುದಾಗಿ ಅಮೆರಿಕದ ಟ್ರಂಪ್ ಆಡಳಿತ ಸೋಮವಾರ ಘೋಷಿಸಿದೆ.

ಇನ್ನೊಂದು ಸರಕಾರದ ಅಂಗವನ್ನು ಅಮೆರಿಕ ಈ ರೀತಿಯಾಗಿ ಘೋಷಿಸಿರುವುದು ‘ಅಭೂತಪೂರ್ವ’ ಹಾಗೂ ‘ಐತಿಹಾಸಿಕ’ ಬೆಳವಣಿಗೆಯಾಗಿದೆ.

‘‘ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ)ನ್ನು ಅದರ ‘ಕೋಡ್ಸ್ ಫೋರ್ಸ್’ ಸಹಿತ ವಿದೇಶಿ ಭಯೋತ್ಪಾದಕ ಸಂಘಟನೆ ಎಂಬುದಾಗಿ ಘೋಷಿಸುವ ನನ್ನ ಸರಕಾರದ ನಿರ್ಧಾರವನ್ನು ನಾನಿಂದು ಔಪಚಾರಿಕವಾಗಿ ಪ್ರಕಟಿಸುತ್ತೇನೆ’’ ಎಂದು ಟ್ರಂಪ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ವಿದೇಶಾಂಗ ಇಲಾಖೆ ತೆಗೆದುಕೊಂಡಿರುವ ಈ ಅಭೂತಪೂರ್ವ ಕ್ರಮವು, ಇರಾನ್ ಭಯೋತ್ಪಾದನೆಗೆ ಪ್ರಾಯೋಜನೆ ನೀಡುವ ದೇಶ ಮಾತ್ರವಲ್ಲ, ಐಆರ್‌ಜಿಸಿಯು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತದೆ ಹಾಗೂ ಸಕ್ರಿಯವಾಗಿ ಆರ್ಥಿಕ ನೆರವನ್ನು ಒದಗಿಸುತ್ತದೆ ಎಂಬುದನ್ನು ಗುರುತಿಸುತ್ತದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News