×
Ad

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಇಬ್ಬರು ಸಂತ್ರಸ್ತ ಸಹೋದರರು ಚುನಾವಣಾ ಕಣಕ್ಕೆ

Update: 2019-04-10 16:57 IST

ಅಹ್ಮದಾಬಾದ್,ಎ.10: 2002ರ ಗುಜರಾತ್ ಗಲಭೆ ವೇಳೆ ನಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಬದುಕುಳಿದ ಇಬ್ಬರು ಸಹೋದರು ಗುಜರಾತ್‌ನಿಂದ ಈ ಸಲದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಮ್ತಿಯಾಝ್ ಖಾನ್ ಪಠಾಣ್ (42) ಅವರು ಖೇಡಾಕ್ಷೇತ್ರದಿಂದ ಅಪ್ನಾ ದೇಶ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರೆ, ಅವರ ಹಿರಿಯ ಸಹೋದರ ಫಿರೋಝ್ ಖಾನ್ ಪಠಾಣ್ (45), ಗಾಂಧಿ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನುಎದುರಿಸಲಿದ್ದಾರೆ.

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಪಠಾಣ್ ಸಹೋದರರು ತಾಯಿ ಹಾಗೂ ಅಜ್ಜಿ ಸೇರಿದಂತೆ ತಮ್ಮ ಕುಟುಂಬದ 10 ಮಂದಿ ಸದಸ್ಯರನ್ನು ಕಳೆದುಕೊಂಡಿದ್ದಾರೆ.
ಪ್ರಸಕ್ತ ಇಮ್ತಿಯಾಝ್ ಖಾನ್ ಅವರು ಅಹ್ಮದಾಬಾದ್‌ನ ಗೋಮತಿಪುರ ಪ್ರದೇಶದ ನಿವಾಸಿಯಾಗಿದ್ದರೆ, ಅವರ ಹಿರಿಯ ಸಹೋದರ ಫಿರೋಝ್ ಖಾನ್ ಗಾಂಧಿನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವೇಜಲ್‌ಪುರದ ನಿವಾಸಿಯಾಗಿದ್ದಾರೆ.
 ಗುಲ್ಬರ್ಗ್ ಹತ್ಯಾಕಾಂಡ ಪ್ರಕರಣದಲ್ಲಿ ಇಮ್ತಿಯಾಝ್ ಖಾನ್ ಅವರು ಪ್ರಮುಖ ಸಾಕ್ಷಿದಾರರಾಗಿದ್ದರು. ಗಾಂಧಿ ನಗರದಲ್ಲಿ ಸ್ಪರ್ಧಿಸುವ ಮೂಲಕ ತಾನು ಅಮಿತ್ ಶಾ ಅವರಿಗೆ, “ನಿಮ್ಮ ವಿರುದ್ಧ ಹೋರಾಡಲುಬರುತ್ತಿದ್ದೇನೆ ಎಂಬ ಸಂದೇಶವನ್ನು ನೀಡಲು ಬಯಸಿದ್ದೇನೆ” ಎಂದರು.

 ಆದರೆ ಬಿಜೆಪಿ ವಿರುದ್ಧದ ಮತಗಳನ್ನು ಒಡೆಯುವುದಕ್ಕೆ ನೆರವಾಗುವ ಉದ್ದೇಶದಿಂದ ತಾನು ಕಣಕ್ಕಿಳಿದಿದ್ದೇನೆಂಬ ಆರೋಪಗಳನ್ನು ಫಿರೋಝ್ಖಾನ್ ನಿರಾಕರಿಸಿದ್ದಾರೆ. ಅವರ ಸಹೋದರ ಇಮ್ತಿಯಾಝ್ ಖಾನ್ ಕೂಡಾ ಗಲಭೆಸಂತ್ರಸ್ತರಿಗಾಗಿ ಬಿಜೆಪಿಹಾಗೂ ಕಾಂಗ್ರೆಸ್ ಏನನ್ನೂ ಮಾಡಿಲ್ಲವೆಂದು ಆರೋಪಿಸುತ್ತಾರೆ. ‘‘ನಾವು 2002ರ ಕೋಮುಗಲಭೆ ಸಂತ್ರಸ್ತರಾಗಿದ್ದೇವೆ. ಕಳೆದ 17 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಫಿರೋಝ್ ಹಾಗೂನಾನು ನಮ್ಮ ತಾಯಿ, ಅಜ್ಜಿ ಹಾಗೂ ಎಂಟು ಮಂದಿಬಂಧುಗಳನ್ನು ಕಳೆದುಕೊಂಡಿದ್ದೇವೆ. ಬಿಜೆಪಿ ಹಾಗೂ ಕಾಂಗ್ರೆಸ್ ನಮಗಾಗಿ ಏನೂ ಮಾಡಿಲ್ಲವೆಂದು’’ ಅವರು ಹೇಳುತ್ತಾರೆ.
 
ರಾಷ್ಟ್ರಮಟ್ಟದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಲು ಅಲ್ಪಸಂಖ್ಯಾತರಿಗೆ ನಾಯಕನೊಬ್ಬ ಇರಬೇಕೆಂದು ನಾನು ಬಲವಾಗಿ ಭಾವಿಸಿದ್ದೇನೆ’’ ಎಂದು ಅವರು ಅಭಿಪ್ರಾಯಿಸುತ್ತಾರೆ. 2002ರ ಫೆಬ್ರವರಿ 28ರಂದು ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿವಸತಿ ಸಂಕೀರ್ಣದಲ್ಲಿ ನಡೆದ ಹಿಂಸಾಚಾರದಲ್ಲಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 68 ಮಂದಿ ಸಾವನ್ನಪ್ಪಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News