×
Ad

ಸಾರಸ್ವತ ಲರ್ನಿಂಗ್ ಫೌಂಡೇಶನ್‌ನಿಂದ ‘ಪ್ರೇರಣಾ’ ಕಾರ್ಯಕ್ರಮ

Update: 2019-04-10 20:28 IST

ಉಡುಪಿ, ಎ.10: ಸಾರಸ್ವತ ಲರ್ನಿಂಗ್ ಫೌಂಡೇಶನ್ ಆಶ್ರಯದಲ್ಲಿ ಇದೇ ಮೇ 4 ಮತ್ತು 5ರಂದು ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ವಿದ್ಯಾರ್ಥಿ ಗಳಿಗಾಗಿ ‘ಪ್ರೇರಣಾ’ ಕಾರ್ಯಕ್ರಮ ನಡೆಯಲಿದೆ.

ಮೇ 4ರಂದು ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಮೇ 5ರಂದು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಲಿದೆ. 10ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲು ಅವಕಾಶವಿದ್ದು, ಕಾರ್ಯಕ್ರಮ ಸಂಪೂರ್ಣ ಉಚಿತ ವಾಗಿದೆ.

ಆಸಕ್ತ ವಿದ್ಯಾರ್ಥಿಗಳು ಆರ್‌ಎಸ್‌ಬಿ ಸಭಾಭವನದ ಕಚೇರಿ, ಶ್ರೀದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಪರ್ಕಳ, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಕಾರ್ಕಳ, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್‌ನಲ್ಲಿ ಪ್ರವೇಶಪತ್ರಗಳನ್ನು ಪಡೆದು ಎ. 25 ರೊಳಗೆ ಭರ್ತಿ ಮಾಡಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News