×
Ad

ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಕ್ರಿಕೆಟ್ ತಂಡಗಳ ಆಯ್ಕೆ ಶಿಬಿರ

Update: 2019-04-10 20:30 IST

ಉಡುಪಿ, ಎ.10: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಆಶ್ರಯದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹದಿನಾಲ್ಕು, ಹದಿನಾರು ಮತ್ತು ಹತ್ತೊಂಭತ್ತು ವರ್ಷ ಕೆಳಗಿನ ಆಟಗಾರರ ಕ್ರಿಕೆಟ್ ತಂಡಗಳನ್ನು ಆಯ್ಕೆ ಮಾಡುವ ಸಲುವಾಗಿ ಆಯ್ಕೆ ಶಿಬಿರವು ಎ.15, 16 ಮತ್ತು 17ರಂದು ನಡೆಯಲಿದೆ.

ಶಿಬಿರದಲ್ಲಿ ಭಾಗವಹಿಸಲು ಆರ್ಹರಿರುವ, 2005ರ ಸೆ.1 ಮತ್ತು ಆನಂತರ ಜನಿಸಿದವರು 14ರ ಕೆಳಹರೆಯದ ತಂಡದ ಆಯ್ಕೆಗಾಗಿ ಎ.15ರಂದು, 2003ರ ಸೆ.1 ಮತ್ತು ಅನಂತರ ಜನಿಸಿರುವವರು 16ರ ಕೆಳಹರೆಯದ ತಂಡದ ಆಯ್ಕೆಗಾಗಿ ಎ.16ರಂದು ಹಾಗೂ 2000ದ ಸೆ.1 ಮತ್ತು ಅನಂತರ ಜನಿಸಿದವರು 19ರ ಕೆಳಹರೆಯದ ತಂಡದ ಆಯ್ಕೆಗಾಗಿ ಎ.17ರಂದು- ಉಡುಪಿ ಜಿಲ್ಲೆಯ ಆಟಗಾರರು ಮಣಿಪಾಲದ ಎಂಡ್ ಪಾಯಿಂಟ್ ಕ್ರಿಕೆಟ್ ಮೈದಾನದಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆಟಗಾರರು ಮಂಗಳೂರಿನ ಸೈಂಟ್ ಅಲೋಸಿಯಸ್ ಶತಮಾನೋತ್ಸವ ಮೈದಾನದಲ್ಲಿ ಬೆಳಗ್ಗೆ 8:00 ಗಂಟೆಗೆ ಹಾಜರಿರಬೇಕೆಂದು ಸೂಚಿಸಲಾಗಿದೆ.

ಆಸಕ್ತ ಆಟಗಾರರು ಬರುವಾಗ ಸೂಕ್ತ ಜನನ ಪ್ರಮಾಣ ಪತ್ರದ ಮೂಲ ಪ್ರತಿ, ಫೋಟೋ ಪ್ರತಿ ಮತ್ತು ಆಟದ ಪರಿಕರಗಳೊಂದಿಗೆ ಹಾಜರಿರುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಚಾಲಕರಾದ ಮನೋಹರ್ ಅಮೀನ್‌ರನ್ನು (ದೂರವಾಣಿ: 9844041836/08244262233) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News