×
Ad

ಎ.15ರಿಂದ ದ.ಕ., ಉಡುಪಿ ಕ್ರಿಕೆಟ್ ತಂಡಗಳ ಆಯ್ಕೆ ಶಿಬಿರ

Update: 2019-04-10 20:42 IST

ಮಂಗಳೂರು, ಎ.10: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಮಂಗಳೂರು ವಲಯದ ಆಶ್ರಯದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ 14, 16 ಮತ್ತು 19 ವರ್ಷ ಹರೆಯದ ಆಟಗಾರರ ಕ್ರಿಕೆಟ್ ತಂಡಗಳನ್ನು ಆಯ್ಕೆ ಮಾಡಲು ಎ.15, 16, 17ರಂದು ಆಯ್ಕೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ದ.ಕ. ಜಿಲ್ಲೆಯ ಆಟಗಾರರು ಮಂಗಳೂರಿನ ಸಂತ ಅಲೋಶಿಯಸ್ ಶತಮಾನೋತ್ಸವ ಮೈದಾನದಲ್ಲಿ ಮತ್ತು ಉಡುಪಿ ಜಿಲ್ಲೆಯ ಆಟಗಾರರು ಮಣಿಪಾಲದ ಎಂಡ್ ಪಾಯಿಂಟ್ ಕ್ರಿಕೆಟ್ ಮೈದಾನದಲ್ಲಿ ಬೆಳಗ್ಗೆ 8 ಗಂಟೆಗೆ ಜನನ ಪ್ರಮಾಣಪತ್ರದ ಮೂಲಪ್ರತಿ, ಫೋಟೋ ಪ್ರತಿ ಮತ್ತು ಆಟದ ಪರಿಕರಗಳೊಂದಿಗೆ ಹಾಜರಿರುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಚಾಲಕ ಮನೋಹರ್ ಅಮೀನ್ (9844041836/ 0824-4262233)ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News