ಮೋದಿ ರಾಜ್ಯದಲ್ಲಿ ಅಪರಾಧ ನಿರ್ಣಯ ಮೊದಲು, ತನಿಖೆ ಅನಂತರ: ಚಿದಂಬರಂ

Update: 2019-04-10 15:38 GMT

ಹೊಸದಿಲ್ಲಿ, ಎ. 10: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ, ಪ್ರಧಾನಿ ಮೋದಿ ಆಡಳಿತದಲ್ಲಿ ಅಪರಾಧ ನಿರ್ಣಯ ಮೊದಲು. ಅನಂತರ ತನಿಖೆ. ಅಮಾಯಕ ಎಂದು ಸಾಬೀತಾಗುವವರೆಗೆ ವ್ಯಕ್ತಿ ಅಪರಾಧಿ ಎಂದರು.

 ಸುಪ್ರೀಂ ಕೋರ್ಟ್ ಹೇಳಿರುವ ಕಾನೂನಿನ ಕೆಲವು ಮೂಲ ಪಾಠವನ್ನು ಕಾನೂನು ಕಾರ್ಯದರ್ಶಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೋಧಿಸಬೇಕು ಎಂದು ಅವರು ಹೇಳಿದರು.

ತನ್ನ ವಿರುದ್ಧ ಮೋದಿ ಇತ್ತೀಚೆಗೆ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಚಿಂದಬರಂ ಪ್ರಧಾನಿ ವಿರುದ್ಧ ಈ ಟೀಕೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಹಣಕಾಸು ಸಚವರನ್ನು ತರಾಟೆಗೆ ತೆಗೆದುಕೊಂಡಿದ್ದರು. ‘‘ಪ್ರಣಾಳಿಕೆ ಸಮಿತಿಯ ನೇತೃತ್ವವನ್ನು ಮಾಜಿ ಹಣಕಾಸು ಸಚಿವರು ವಹಿಸಿರುವುದು ಓದಿ ಆಘಾತವಾಯಿತು. ಆದರೆ ಆಶ್ಚರ್ಯವಾಗಲಿಲ್ಲ. ಅವರಿಗೆ ಜಾಮೀನು ಪಡೆಯುವುದು ಮುಖ್ಯ.’’ ಎಂದು ಚಿದಂಬರಂ ಹಾಗೂ ಅವರ ಪುತ್ರನ ವಿರುದ್ಧದ ಪ್ರಕರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಮೋದಿ ಹೇಳಿದ್ದರು. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ನ್ಯಾಯಾಲಯ ಅವರಿಗೆ ಈಗಾಗಲೇ ಜಾಮೀನು ಮಂಜೂರು ಮಾಡಿದೆ.

‘‘ಮೋದಿ ರಾಜ್ಯದಲ್ಲಿ ಅಪರಾಧ ನಿರ್ಣಯ ಮೊದಲು. ತನಿಖೆ ಅನಂತರ ನಡೆಯುತ್ತದೆ ! ಮೋದಿ ರಾಜ್ಯದಲ್ಲಿ ಅಮಾಯಕತೆ ಸಾಬೀತಾಗುವವರೆಗೆ ವ್ಯಕ್ತಿ ಅಪರಾಧಿ ! ಪ್ರಧಾನಿ ಅವರಿಗೆ ಏನಾದರೂ ಸಂಶಯ ಇದ್ದರೆ ಗೆಳೆಯ ಅರುಣ್ ಜೇಟ್ಲಿ ಅವರನ್ನು ಕೇಳಬಹುದು’’ ಎಂದು ಚಿದಂಬರಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News