ಅಮೃತ್ ಶೆಣೈ ವಿರುದ್ಧ ಪ್ರಕರಣ ದಾಖಲು
Update: 2019-04-10 22:25 IST
ಉಡುಪಿ, ಎ.10: ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ ಶೆಣೈ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೃತ್ ಶೆಣೈ ತನ್ನ ಫೇಸ್‌ಬುಕ್ ಖಾತೆಯಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ ಎ. 5ರ ಮಧ್ಯಾಹ್ನ 1:20ರಿಂದ ಎ.6ರ ಮಧ್ಯಾಹ್ನ 1:13ರ ಮಧ್ಯಾವಧಿ ಯಲ್ಲಿ ಮತಯಾಚನೆ ಮಾಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿ ಚುನಾವಣೆ ನೀತ ಸಂಹಿತೆ ಉಲ್ಲಂಘನೆ ಮಾಡಿರುವುದಾಗಿ ಅಧಿಕಾರಿ ರಾಮ ನರಸಿಂಹ ಹೆಗಡೆ ನೀಡಿ ದೂರಿನಂತೆ ಪ್ರಕರಣ ದಾಖಲಾಗಿದೆ.