ದೇಶವನ್ನು ತಪ್ಪುದಾರಿಗೆಳೆದ ಪ್ರಧಾನಿ ಕ್ಷಮೆಯಾಚಿಸಲಿ: ಮಾಯಾವತಿ

Update: 2019-04-10 17:55 GMT

 ಲಕ್ನೋ,ಎ.10: ರಫೇಲ್ ಒಪ್ಪಂದ ಬಗ್ಗೆ ದೇಶವನ್ನು ತಪ್ಪುದಾರಿಗೆಳೆದಿದ್ದುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕ್ಷಮೆಯಾಚಿಸಬೇಕೆಂದು ಬಿಎಸ್‌ಪಿ ನಾಯಕಿ ಮಾಯಾವತಿ ಬುಧವಾರ ಆಪಾದಿಸಿದ್ದಾರೆ.

 ರಫೇಲ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋಟ್ ನೀಡಿದ ತೀರ್ಪಿನ ಮರುಪರಿಶೀಲನೆಯನ್ನು ಕೋರಿ ಅರ್ಜಿ ಸಲ್ಲಿಸಿದ ವೇಳೆ ಒದಗಿಸಲಾದ ದಾಖಲೆಗಳು ಅಕ್ರಮವಾಗಿ ಸೋರಿಕೆಯಾದವಾಗಿದ್ದು, ಅವುಗಳನ್ನು ಪರಿಶೀಲಿಸಬಾರದೆಂಬ ಕೇಂದ್ರ ಸರಕಾರದಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಮಾಯಾವತಿ ಈ ಪ್ರತಿಕ್ರಿಯೆ ನೀಡಿದ್ದಾರೆ.

  ‘‘ರಫೇಲ್ ಒಪ್ಪಂದದಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ನ್ಯೂನತೆಗಳನ್ನು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಮುಚ್ಚಿಡುವ ಮೋದಿ ಸರಕಾರದ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಬಿಜೆಪಿ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಬಲೆಗೆ ಬಿದ್ದಿದೆ’’ ಎಂದುಮಾಯಾವತಿ ಟ್ವೀಟ್ ಮಾಡಿದ್ದಾರೆ.

 ‘‘(ರಫೇಲ್ ಹಗರಣಕ್ಕೆ ಸಂಬಂಧಿಸಿ) ಸಂಸತ್‌ನ ಒಳಗೆ ಹಾಗೂ ಹೊರಗೆ ಪದೇ ಪದೇ ಸುಳ್ಳುಹೇಳುವುದಕ್ಕಾಗಿ ಮತ್ತು ದೇಶವನ್ನು ತಪ್ಪುದಾರಿಗೆ ಎಳೆದುದಕ್ಕಾಗಿ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು ಹಾಗೂ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕು’’ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News