ಚೆನ್ನೈ ಪಿಚ್ ಕುರಿತು ಧೋನಿ ಅಸಮಾಧಾನ

Update: 2019-04-11 05:55 GMT

ಚೆನ್ನೈ, ಎ.10: ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತವರು ಚೆನ್ನೈನಲ್ಲಿ ನಡೆದ ಈ ಆವೃತ್ತಿಯ ಎಲ್ಲ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡ ಮಧ್ಯೆಯೂ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪಿಚ್ ವರ್ತಿಸುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘‘ ಇಂತಹ ಟ್ರಾಕ್‌ಗಳಲ್ಲಿ ಆಡುವುದನ್ನು ನಾವು ಬಯಸುವುದಿಲ್ಲ. ಈ ಪಿಚ್‌ನಲ್ಲಿ ಅತೀ ಕಡಿಮೆ ಮೊತ್ತ ದಾಖಲಾಗುತ್ತಿದೆ. ನಮ್ಮ ದಾಂಡಿಗರಿಗೂ ಇದು ಸ್ವಲ್ಪ ಕಠಿಣವಾಗುತ್ತಿದೆ. ಡ್ವೇನ್ ಬ್ರಾವೊ ಅವರ ಅನುಪಸ್ಥಿತಿಯಲ್ಲಿ ಸೂಕ್ತ ಜೋಡಿಯ ಕೊರತೆ ನಮಗೆ ಕಾಡುತ್ತಿದೆ’’ ಎಂದು ಪಂದ್ಯದ ನಂತರ ಧೋನಿ ಪ್ರತಿಕ್ರಿಯಿಸಿದರು.

ಟ್ರಾಕ್‌ನ ವಿಷಮ ಪರಿಸ್ಥಿತಿಯನ್ನು ಮೀರಿ ನಾವು ಪಂದ್ಯ ಗೆದ್ದೆವು ಎಂದ ಧೋನಿ, ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ ಇಮ್ರಾನ್ ತಾಹಿರ್ ಹಾಗೂ ಹರ್ಭಜನ್ ಅವರನ್ನು ಹೊಗಳುವುದು ಮರೆಯಲಿಲ್ಲ.

ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಕೋಲ್ಕತಾವನ್ನು 7 ವಿಕೆಟ್‌ಗಳಿಂದ ಮಣಿಸಿತ್ತು. ಆ ತಂಡ ಆಡಿದ 6 ಪಂದ್ಯಗಳ ಪೈಕಿ ಐದನೇ ಹಾಗೂ ತವರು ಮೈದಾನದಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿತ್ತು. ಕೆಕೆಆರ್ ನೀಡಿದ 109 ರನ್‌ಗಳ ಗುರಿಯನ್ನು 17.2 ಓವರ್‌ಗಳಲ್ಲಿ ಚೆನ್ನೈ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News