×
Ad

ಮಾದರಿ ನೀತಿ ಸಂಹಿತೆ ಅನುಸರಿಸಿ: ಪ್ರಸಾರ ಭಾರತಿಗೆ ಐಬಿ ಸಚಿವಾಲಯ ನಿರ್ದೇಶ

Update: 2019-04-11 21:26 IST

ಹೊಸದಿಲ್ಲಿ, ಎ. 11: ಎಲ್ಲ ಅಂಗೀಕೃತ ಪಕ್ಷಗಳ ‘ಸಮತೋಲನದ ಕವರೇಜ್’ ಮಾಡಲು ಮಾದರಿ ನೀತಿ ಸಂಹಿತೆ ಅನುಸರಿಸಿ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಪ್ರಸಾರ ಭಾರತಿಗೆ ಬುಧವಾರ ಸೂಚಿಸಿದೆ.

ವಿವಿಧ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ಕವರೇಜ್ ಸಮತೋಲನವಾಗಿಲ್ಲ ಎಂದು ಚುನಾವಣಾ ಆಯೋಗ ಮಂಗಳವಾರ ಸಚಿವಾಲಯಕ್ಕೆ ಪತ್ರ ಬರೆದ ಬಳಿಕ ಸಚಿವಾಲಯ ಪ್ರಸಾರ ಭಾರತಿಗೆ ಈ ಸೂಚನೆ ನೀಡಿದೆ.

ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನ ಪ್ರಸಾರ ಭಾರತಿಯ ಪ್ರಸಾರ ವೇದಿಕೆ. ಆಲ್ ಇಂಡಿಯಾ ರೇಡಿಯೋ ಹಾಗೂ ಡಿಡಿಯ ಜನರಲ್ ಸೇವೆಯಲ್ಲಿ ಮಾದರಿ ನೀತಿ ಸಂಹಿತೆ ಅನುಸರಿಸುವಂತೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖಾರೆ ಪ್ರಸಾರ ಭಾರತಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಶಶಿ ಶೇಖರ್ ವೆಂಪಂಟಿ ಅವರಿಗೆ ನಿರ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಪ್ರಿಲ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರ ‘ನಾನು ಕೂಡ ಚೌಕಿದಾರ’ ಕಾರ್ಯಕ್ರಮ ಸುಮಾರು 1 ಗಂಟೆಗಳ ಕಾಲ ಪ್ರಸಾರವಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗ ಡಿಡಿ ನ್ಯೂಸ್‌ಗೆ ನೋಟಿಸು ಜಾರಿ ಮಾಡಿತ್ತು. ಡಿಡಿ ನ್ಯೂಸ್ ಎಪ್ರಿಲ್ 5ರಂದು ಸಲ್ಲಿಸಿದ ವರದಿ ಆಧಾರದಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಮಾದರಿ ನೀತಿ ಸಂಹಿತೆಗೆ ಅನುಗುಣವಾಗಿ ಇರಲಿಲ್ಲ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News